- Advertisement -
- Advertisement -
ವಿಟ್ಲ: ಕಾರು ಮತ್ತು ಆಕ್ಟೀವ್ ಮುಖಾಮುಖಿ ಡಿಕ್ಕಿ ಹೊಡದ ಪರಿಣಾಮ ಮಗು ಸಹಿತ ಒಟ್ಟು ಮೂವರು ಗಾಯಗೊಂಡ ಘಟನೆ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಸಂಭವಿಸಿದೆ.
ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಕಾರು ತೆರಳುತ್ತಿದ್ದ ಕಾರು ಹಾಗೂ ಮಾಣಿ ಕಡೆಗೆ ತೆರಳುತ್ತಿದ್ದ ಆಕ್ಟೀವ್ ವಾಹನ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಪೆರಾಜೆ ರಾಮಚಂದ್ರಾಪುರ ಮಠಕ್ಕೆ ತೆರಳುವ ರಸ್ತೆಯ ಮುಂಭಾಗ ಮುಖಾಮುಖಿ ಡಿಕ್ಕಿ ಹೊಡೆದೆ. ಘಟನೆ ತೀವ್ರತೆಗೆ ಕಾರು ಚರಂಡಿಗೆ ಉರುಳಿದೆ. ಕಾರಿನಲ್ಲಿದ್ದವರು ಮೈಸೂರು ಮೂಲದವರಾಗಿದ್ದು, ಕಾರಿನಲ್ಲಿದ್ದ ಮಗು ಗಂಭೀರ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಆಕ್ಟೀವ್ ನಲ್ಲಿದ್ದ ಇಬ್ಬರು ಸವಾರರಿಗೂ ಗಾಯವಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
- Advertisement -