- Advertisement -
- Advertisement -
ಪುತ್ತೂರು: ಕಾರು ಚಾಲಕ ತನ್ನ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ಒಮ್ಮೇಲೆ ಯು ಟರ್ನ್ ಮಾಡಿದ ಪರಿಣಾಮ ಆಟೋರಿಕ್ಷಾಗೆ ಕಾರು ಅಪಘಾತವಾದ ಘಟನೆ ಪುತ್ತೂರು ಕಸಬಾ ಗ್ರಾಮದ ಸೂರ್ಯ ಪ್ರಭಾ ಜೀನ್ಸ್ ಅಂಗಡಿ ಬಳಿ ನಡೆದಿದೆ.
ಗಾಯಗೊಂಡ ವ್ಯಕ್ತಿಗಳನ್ನು ಚಿಕ್ಕಮುಡ್ನೂರು ಗ್ರಾಮ ಪುತ್ತೂರು ನಿವಾಸಿ ಹರೀಶ್ ಕೆ(42) ಹಾಗೂ ಕೆ.ಸಚ್ಚಿದಾನಂದ ರಾವ್ ಎಂದು ಗುರುತಿಸಲಾಗಿದೆ.
ಕಾರು ಚಾಲಕ ನಿರ್ಲಕ್ಷ್ಯತನದಿಂದ ರಸ್ತೆಯಲ್ಲಿ ಒಮ್ಮೇಲೆ ಯು ಟರ್ನ್ ಮಾಡಿದ ಪರಿಣಾಮ ರಿಕ್ಷಾ ಚಾಲಕ ಮತ್ತು ಪ್ರಾಯಾಣಿಕ ಆಟೋರಿಕ್ಷಾ ಸಮೇತ ರಸ್ತೆಗೆ ಬಿದ್ದು ಗಾಯವಾಗಿದ್ದು, ಸಚ್ಚಿದಾನಂದ ರವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಅಪಘಾತದ ಬಳಿಕ ಕಾರು ಚಾಲಕ ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಆಸ್ಪತ್ರೆಗೆ ದಾಖಲಿಸದೇ, ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬುದಾಗಿ ನೀಡಿದ ದೂರಿನಂತೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -