Friday, June 5, 2026
spot_imgspot_img
spot_imgspot_img

ಬೆಳ್ತಂಗಡಿ : ಪಿಕಪ್ ವಾಹನಕ್ಕೆ ಕಾರು ಡಿಕ್ಕಿ : ಪಿಕಪ್‌ಗೆ ಹಾನಿ ಮಾಡಿ ಚಾಲಕನಿಗೆ ಹಲ್ಲೆಗೆ ಯತ್ನಿಸಿದ ಕಾರು ಪ್ರಯಾಣಿಕರು

- Advertisement -
- Advertisement -

ಬೆಳ್ತಂಗಡಿ : ಪಿಕಪ್ ವಾಹನಕ್ಕೆ ಕಾರು ಡಿಕ್ಕಿ ಹೊಡೆದುದಲ್ಲದೆ ಮಗುಚಿ ಬಿದ್ದ ಪಿಕಪ್ ವಾಹನಕ್ಕೆ ಕಾರಿನಲ್ಲಿದ್ದವರು ಹೊಡೆದು ಗಾಜು ಪುಡಿ ಮಾಡಿ ಹಾನಿಗೊಳಿಸಿ ಲಕ್ಷಾಂತರ ರೂಪಾಯಿ ನಷ್ಟ ಉಂಟುಮಾಡಿದ ಘಟನೆ ಬೆಳ್ತಂಗಡಿ, ಮರೋಡಿ ಗ್ರಾಮದ ಕುಂಜೋಡಿ ಎಂಬಲ್ಲಿ ನಡೆದಿದೆ.

ಪಿಕಪ್ ಚಾಲಕ, ಪೆರಾಡಿ ನಿವಾಸಿ ಸಾಧಿಕ್ ಝನುದ್ದೀನ್ ಅವರು ಪಿಕ್‌ಅಪ್ ವಾಹನದಲ್ಲಿ ಮರೋಡಿ ಗ್ರಾಮದ ಕುಂಜೋಡಿ ಎಂಬಲ್ಲಿ ತೆರಳುತ್ತಿದ್ದಾಗ, ಎದುರುಗಡೆಯಿಂದ ಕೆಎ 19 ಝಡ್ 8972 ನೋಂದಣಿ ಸಂಖ್ಯೆಯ ಕಾರನ್ನು, ಅದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ, ಪಿಕಪ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿಕಪ್ ವಾಹನ ರಸ್ತೆ ಬದಿ ಮಗುಚಿ ಬಿದ್ದಿರುತ್ತದೆ.

ಬಳಿಕ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಹೊರಬಂದು, ಮಗುಚಿ ಬಿದ್ದ ಪಿಕಪ್ ವಾಹನಕ್ಕೆ ಕೈಯಿಂದ ಹೊಡೆಯಲು ಪ್ರಾರಂಭಿಸಿದ್ದು, ಈ ವೇಳೆ ಝನುದ್ದೀನ್ ಅವರು ಪಿಕಪ್ ವಾಹನದಿಂದ ಹೊರಬಂದಾಗ, ಅದೇ ವ್ಯಕ್ತಿಗಳು ಅವರಿಗೂ ಹಲ್ಲೆ ನಡೆಸಲು ಮುಂದಾಗಿರುತ್ತಾರೆ. ಈ ವೇಳೆ ಝನುದ್ದೀನ್ ಅಲ್ಲಿಂದ ಓಡಿ ತಪ್ಪಿಸಿಕೊಂಡಿದ್ದು, ಬಳಿಕ ಆರೋಪಿಗಳು ಘಟನಾ ಸ್ಥಳಕ್ಕೆ ಇನ್ನಿಬ್ಬರನ್ನು ಬರಮಾಡಿ, ಪಿಕಪ್ ವಾಹನದ ಗಾಜುಗಳನ್ನು ಒಡೆದು ಹಾಕಿರುವುದಲ್ಲದೇ, ವಾಹನದ ಬಾಗಿಲನ್ನು ಹಾನಿಗೊಳಿಸಿರುತ್ತಾರೆ. ಇದರಿಂದಾಗಿ ಝನುದ್ದೀನ್ ಅವರಿಗೆ ಸುಮಾರು 3 ಲಕ್ಷ ರೂಪಾಯಿ ನಷ್ಟ ಉಂಟಾಗಿರುತ್ತದೆ ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!