Saturday, May 4, 2024
spot_imgspot_img
spot_imgspot_img

ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿ ಇಟ್ಟ ಪ್ರಕರಣ: ಆರೋಪಿಗಳು ಅಂದರ್..!

- Advertisement -G L Acharya panikkar
- Advertisement -

ಬೆoಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಯಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಕೇವಲ 48 ಗಂಟೆಗಳಲ್ಲಿ ಪ್ರಕರಣ ಪೊಲೀಸರು ಅಂತ್ಯಗೊಳಿಸಿದ್ದಾರೆ. ಪೊಲೀಸರ ಶರವೇಗದ ತನಿಖೆಯಿಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಶ್ರೀಧರ್, ನವೀನ್ ಹಾಗೂ ನೇಪಾಳ ಮೂಲದ ಸಾಗರ್ ತಾಪ ಎಂದು ಗುರುತಿಸಲಾಗಿದೆ.

ಪ್ರಕರಣದಲ್ಲಿ ಈ ಮೂವರು ಆರೋಪಿಗಳು ಸಿಕ್ಕಿಬೀಳಳು ಎರಡು ಸುಳಿವು ಮುಖ್ಯಕಾರಣ. ಆ ಎರಡು ಸುಳಿವು ಈ ಪ್ರಕರಣವನ್ನು ಅಂತ್ಯಕ್ಕೆ ಕರೆದೆ ಬಿಟ್ಟಿತ್ತು. ಪೊಲೀಸರಿಗೆ ಒಂದು ಕದ್ದ ಬೈಕ್…ಇನ್ನೊಂದು ಬೆಂಕಿ ಹಚ್ಚುವಾಗ ಆರೋಪಿ ಗಾಯಗೊಂಡಿದ್ದ ಎರಡು ಸುಳಿವು ಆರೋಪಿಗಳನ್ನು ಕಂಡು ಹಿಡಿಯಲು ಸಾಧ್ಯವಾಗಿದ್ದು. 123 ಸಿಸಿಟಿವಿ ವಿಡಿಯೋಗಳ ಪೈಕಿ ಬಹುತೇಕ ಫುಟೇಜ್‌ಗಳಲ್ಲಿ ಆರೋಪಿಗಳ ಚಟುವಟಿಕೆ ದಾಖಲಾಗಿತ್ತು.

ಕದ್ದ ಬೈಕ್, ಗಾಯಗೊಂಡಿದ್ದ ಅರೋಪಿ ನವೀನ್ ಓಡಾಟವೂ ಸೆರೆಯಾಗಿತ್ತು. ಎರಡು ಸುಳಿವು ಸಿಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿದ ತನಿಖಾ ತಂಡ ಮೊದಲು ಕದ್ದ ಬೈಕ್ ಮಾಡೆಲ್ ಬಗ್ಗೆ ಮಾಹಿತಿ ಪಡೆದರು. ಇದಾದ ಬಳಿಕ ಸೈಬರ್ ಪರಿಣಿತರ ಮೂಲಕ ಆರೋಪಿಗಳಿಗಾಗಿ ಬಲೆ ಬೀಸಿದರು. ಕೊನೆಗೆ ಕದ್ದ ಬೈಕ್ ನೀಡಿದ ಸುಳಿವಿನ ಮೆರೆಗೆ ಪೊಲೀಸ್ ಬಲೆಗೆ ಈ ಮೂವರು ಆರೋಪಿಗಳು ಬಿದ್ದಿದ್ದಾರೆ. ಆರೋಪಿಗಳಲ್ಲಿ ಇಬ್ಬರನ್ನು ಗಾರ್ವೇಬಾವಿಪಾಳ್ಯ ಬಳಿ ಬಂಧಿಸಿರುವ ಪೊಲೀಸರು ಮತ್ತೊಬ್ಬನನ್ನು ಬಂಡೇಪಾಳ್ಯದ ಸ್ಮಶಾನದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕ ಸತೀಶ್ ರೆಡ್ಡಿ ದೊಡ್ಡ ದೊಡ್ಡ ಕಾರುಗಳಲ್ಲಿ ಓಡಾಡುತ್ತಿದ್ದರು. ಅಂತಹವರಿಗೆ ಬುದ್ದಿ ಕಲಿಸಬೇಕು ಎಂಬ ಉದ್ದೇಶದಿಂದ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!