- Advertisement -
- Advertisement -
ಪುತ್ತೂರು:-ಕಾವು ಕೌಡಿಚ್ಚಾರ್ ಬಳಿಯ ಮಿನೋಜಿಕಲ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಹೊಳೆಗೆ ಕಾರೊಂದು ಹೊಳೆಗೆ ಬಿದ್ದ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ಹೋಗುತಿದ್ದ ಆಲ್ಟೋ ಕಾರು ಚಾಲಕನ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದೆ. ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತಗಳ ವಲಯ ಎಂದೇ ಬಿಂಬಿತವಾಗಿರುವ ಈ ಪ್ರದೇಶ ಒಂದು ವಾರದಿಂದೀಚೆಗೆ ನಡೆದ ನಾಲ್ಕನೇ ಅಪಘಾತ ಇದಾಗಿದೆ. ಸೇತುವೆಯ ತಡೆಗೋಡೆಗೆ ಈ ಹಿಂದೆ ಲಾರಿ ಗುದ್ದಿದ ಪರಿಣಾಮ ತಡೆಗೋಡೆ ಕುಸಿತಗೊಂಡಿದ್ದು ,ಇದನ್ನು ಮರು ನಿರ್ಮಾಣ ಮಾಡದಿರುವುದು ಸ್ಥಳೀಯರ ಆಕ್ರೋಶ ಕಾರಣವಾಗಿದೆ.
- Advertisement -