Monday, June 8, 2026
spot_imgspot_img
spot_imgspot_img

ವೆಸ್ಟ್ ಇಂಡೀಸ್‌ನಲ್ಲಿಇಂದಿನಿಂದ ಕೆರಿಬಿಯನ್ ಟಿ20 ಹಬ್ಬ.

- Advertisement -
- Advertisement -

ಟ್ರಿನಿಡಾಡ್:- ಕ್ರಿಕೆಟ್‌ ಪ್ರೇಮಿಗಳಿಗೆ ಭರಪೂರ ಮನೋರಂಜೆ ನೀಡಿರುವ ಟೂರ್ನಿಗಳಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಬೋರ್ಡ್‌ ಆತಿಥ್ಯದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಕೂಡ ಒಂದು.ಕೋವಿಡ್‌-19 ಮಹಾಮಾರಿ ಹಾವಳಿಯ ನಡುವೆ  ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಇಂದು ಚಾಲನೆ ಸಿಗಲಿದ್ದು, ಟ್ರಿನಿಬಾಗೊ ನೈಟ್‌ರೈಡರ್ಸ್‌ ಮತ್ತು ಗಯಾನಾ ಅಮೆಜಾನ್ ವಾರಿಯರ್ಸ್‌ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಟೂರ್ನಿಯ ಪಂದ್ಯಗಳು ಭಾರತದಲ್ಲೂ ನೇರಪ್ರಸಾರ ಕಾಣಲಿವೆ.

ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ, ಸೋಮವಾರ ಅಧಿಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆಗಸ್ಟ್‌ 18ರಂದು ಆರಂಭಾಗಲಿರುವ ಸಿಪಿಎಲ್‌ ಟೂರ್ನಿ ಸೆಪ್ಟೆಂಬರ್‌ 10ರಂದು ಕೊನೆಗೊಳ್ಳಲಿದೆ.6 ತಂಡಗಳ ಟೂರ್ನಿಯ ಎಲ್ಲ 33 ಪಂದ್ಯಗಳು ಟ್ರಿನಿಡಾಡ್-ಟೊಬಾಗೋ ದ್ವೀಪದ 2 ತಾಣಗಳಲ್ಲಿ ನಡೆಯಲಿವೆ.ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯಗಳೂ ಸೇರಿದಂತೆ ಒಟ್ಟು 23 ಪಂದ್ಯಗಳು ನಡೆಯಲಿದೆ. ಉಳಿದ 10 ಲೀಗ್‌ ಪಂದ್ಯಗಳಿಗೆ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.  ಸಿಪಿಎಲ್ ಪಂದ್ಯಗಳು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನಲ್‌ನಲ್ಲಿ ನೇರಪ್ರಸಾರ.

ತಂಡಗಳು:-ಟ್ರಿನಿಬಾಗೊ ನೈಟ್‌ರೈಡರ್ಸ್‌,ಜಮೈಕಾ ತಲ್ಲವಾಹ್ಸ್ಸೇಂಟ್ ಲೂಸಿಯಾ ಜೌಕ್ಸ್ ,ಸೇಂಟ್ ಕಿಟ್ಸ್ ಆಂಡ್ ನೆವಿಸ್ ಪ್ಯಾಟ್ರಿಯಾಟ್ಸ್ಬಾರ್ಬಡೋಸ್ ಟ್ರೈಡೆಂಟ್ಸ್ , ಗಯಾನಾ ಅಮೆಜಾನ್ ವಾರಿಯರ್ಸ್‌,

- Advertisement -

Related news

error: Content is protected !!