Friday, June 5, 2026
spot_imgspot_img
spot_imgspot_img

ಪತ್ನಿ ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿಟ್ಟಿದ್ದ ಪ್ರಕರಣ: ಆರೋಪಿ ಪತಿಗೆ 14 ದಿನ ನ್ಯಾಯಾಂಗ ಬಂಧನ..!

- Advertisement -
- Advertisement -

ಬೆಂಗಳೂರು: ಪತ್ನಿ ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

ಆರೋಪಿ ರಾಕೇಶ್ ಕಡೇಕರ್ ನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದರು. ಇದೀಗ ಆರೋಪಿಯನ್ನು ಕೋರಮಂಗಲ ಎನ್‌ಜಿವಿ ಮ್ಯಾಜಿಸ್ಟ್ರೇಟ್ ಕೋರ್ಟ್ ಜಡ್ಜ್ ನಿವಾಸಕ್ಕೆ ಹಾಜರುಪಡಿಸಿದ್ದರು. ಬಳಿಕ ರಾಕೇಶ್‌ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಸದ್ಯ ಆರೋಪಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾನೆ.

ಸ್ವಂತ ಅತ್ತೆ ಮಗಳು ಗೌರಿಯನ್ನ ಕುಟುಂಬದ ವಿರೋಧದ ನಡುವೆ ಮದುವೆಯಾಗಿದ್ದ ಆರೋಪಿ ರಾಕೇಶ್, ಇದೀಗ ಆಕೆಯನ್ನೇ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಆತ, ಆಕೆಯ ಕಾಲುಗಳನ್ನು ಮುರಿದು ಶವವನ್ನು ಟ್ರ‍್ಯಾಲಿ ಬ್ಯಾಗ್‌ಗೆ ತುಂಬಿದ್ದ. ಅದೇ ಬ್ಯಾಗ್‌ನನ್ನ ಎಳೆಯುವಾಗ ಹ್ಯಾಂಡಲ್ ಕಟ್ ಆಗಿದೆ. ಆದ್ದರಿಂದ ಶವವನ್ನ ಅಲ್ಲೇ ಬಿಟ್ಟು ಕಾರ್‌ನಲ್ಲಿ ಪರಾರಿಯಾಗಿದ್ದ.

ಮಾರ್ಚ್ 27ರಂದು ಮಧ್ಯಾಹ್ನ ಗೌರಿ ಅಣ್ಣ ಗಣೇಶ್‌ಗೆ ಕರೆ ಮಾಡಿ, ನಿನ್ನ ತಂಗಿಯನ್ನು ಕೊಂದಿದ್ದೇನೆ, ನಾನು ಸಾಯುತ್ತಿದ್ದೇನೆಂದು ಹೇಳಿದ್ದ. ಅಷ್ಟೇ ಅಲ್ಲದೆ ತನ್ನ ತಂದೆಗೂ ಕರೆಮಾಡಿದ್ದ. ಅವಳು ನನ್ನ ಜೊತೆ ಜಗಳ ಮಾಡುತ್ತಿದ್ದಳು ಅದಕ್ಕೆ ಕೊಲೆ ಮಾಡಿದೆ. ಯುವತಿಯ ತಾಯಿಗೂ ಹೆಂಡತಿ ಕಾಟ ಕೊಡುತ್ತಿದ್ದಾಳೆ ಎಂದು ಹೇಳಿದ್ದ. ಕೊಲೆ ಮಾಡಿ ಮೊದಲನೇ ದಿನ ಏನು ಹೇಳಿಲ್ಲ. ಕೊಲೆ ಮಾಡಿ ಎರಡನೇ ದಿನ ತಂದೆಗೆ ಕಾಲ್ ಮಾಡಿ ಹತ್ಯೆಯ ವಿಷಯ ತಿಳಿಸಿ ನಾನು ಸೂಸೈಡ್ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದ.

- Advertisement -

Related news

error: Content is protected !!