- Advertisement -
- Advertisement -



ಸುಳ್ಯ: ಪಂಜದಲ್ಲಿ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಪತ್ತೆಯಾಗಿದ್ದು, ಪಿಕಪ್ ವಾಹನ, ಪಿಕಪ್ ಚಾಲಕ, ಜಾನುವಾರುಗಳನ್ನು ಗುರುವಾರ ಸುಬ್ರಹ್ಮಣ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ವಾಹನ ಚಾಲಕ ಸಕಲೇಶಪುರ ಮೂಲದ ಲೋಹಿತ್ ಎಂದು ಗುರುತಿಸಲಾಗಿದೆ.
ಬೆಳ್ಳಾರೆ ಕಡೆಯಿಂದ ಪಂಜದ ಕಡೆ ಬರುತ್ತಿದ್ದ ಪಿಕಪ್ ವಾಹನದಲ್ಲಿ ಎರಡು ದನ ಹಾಗೂ ಎರಡು ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಮಾಹಿತಿ ಪಡೆದ ಪೊಲೀಸರು ವಾಹನ ಸಹಿತ ಚಾಲಕ, ನಾಲ್ಕು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಜಾನುವಾರುಗಳನ್ನು ಚೊಕ್ಕಾಡಿಯಿಂದ ಸಾಕುವ ಉದ್ದೇಶದಿಂದ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಆದರೆ ಅನುಮತಿ ಪಡೆಯದೆ
ನಿಯಮಬಾಹಿರವಾಗಿ ಸಾಗಾಟ ನಡೆಸಿದ ಆರೋಪ ಕೇಳಿ ಬಂದಿದೆ .
- Advertisement -