Monday, June 15, 2026
spot_imgspot_img
spot_imgspot_img

ಕೇದಾರ್‌ನಾಥ್ 2 ಹೊಸ ರೋಪ್‌ವೇಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

- Advertisement -
- Advertisement -

ಕೇದಾರನಾಥ್: ಪ್ರವಾಸೋದ್ಯಮಕ್ಕೆ ಒತ್ತು ನೀಡುವ ಉದ್ದೇಶದಿಂದ ಉತ್ತರಾಖಂಡದಲ್ಲಿ 6,811 ಕೋಟಿ ರೂ. ವೆಚ್ಚದಲ್ಲಿ 2 ಹೊಸ ರೋಪ್‌ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ.

ಸೋನ್‌ಪ್ರಯಾಗ್- ಕೇದಾರನಾಥ್ ಮತ್ತು ಹೇಮಕುಂಡ್ ಸಾಹಿಬ್- ಗೋವಿಂದಘಾಟ್ ನಡುವಿನ ರೋಪ್ ವೇಗಳು ಮುಂದಿನ 4ರಿಂದ 6 ವರ್ಷಗಳೊಳಗೆ ಸಂಪೂರ್ಣವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಸೋನ್‌ಪ್ರಯಾಗ್-ಕೇದಾರನಾಥ್ 12.9 ಕಿ.ಮೀ.ವರೆಗಿನ ಮತ್ತು ಹೇಮಕುಂಡ್ ಸಾಹಿಬ್-ಗೋವಿಂದಘಾಟ್ 12.4 ಕಿ.ಮೀ. ನಡುವೆ ರೋಪ್‌ವೇ ನಿರ್ಮಾಣ ಮಾಡಲಾಗುತ್ತದೆ. ಹೀಗಾಗಿ 8 ಗಂಟೆ ಬೇಕಾಗಿದ್ದ ಪ್ರಯಾಣದ ಅವಧಿ ಕೇವಲ 40 ನಿಮಿಷ ತೆಗೆದುಕೊಳ್ಳಲಿದೆ. ಈ ರೋಪ್‌ವೇಯು ಭಾರತದ ಉದ್ದ ರೋಪ್ ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಕೇದಾರನಾಥ್‌ನಿಂದ ಸೋನ್‌ಪ್ರಯಾಗ್ ನಡುವಿನ ರೋಪ್‌ವೇ ಅನ್ನು 4,081 ಕೋಟಿ ರೂ. ವೆಚ್ಚದಲ್ಲಿ, ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವದಲ್ಲಿ ನಿರ್ಮಿಸಲಾಗುತ್ತದೆ. ಅತ್ಯಾಧುನಿಕ ಟ್ರೈಕೇಬಲ್ ಡಿಟ್ಯಾಚೇಬಲ್ ಗೊಂಡೋಲ (3ಎಸ್) ತಂತ್ರಜ್ಞಾನ ಬಳಸಿ ಇದರ ನಿರ್ಮಾಣವಾಗುತ್ತದೆ. ಪ್ರತಿ ಗಂಟೆಗೆ 1,800 ಪ್ರಯಾಣಿಕರು, ಪ್ರತಿ ದಿನ ಸುಮಾರು 18,000 ಪ್ರಯಾಣಿಕರನ್ನು ಈ ಕೇಬಲ್ ಕಾರ್ ಕರೆದೊಯ್ಯಲಿದೆ. ಹೇಮಕುಂಡ್ ಸಾಹಿಬ್ ಜಿ ಮತ್ತು ಗೋವಿಂದಘಾಟ್ ನಡುವಿನ ರೋಪ್‌ವೇ 2,730 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

- Advertisement -

Related news

error: Content is protected !!