Saturday, May 4, 2024
spot_imgspot_img
spot_imgspot_img

ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್​ ವಿಲಾಸ್​ ಪಾಸ್ವಾನ್ ವಿಧಿವಶ

- Advertisement -G L Acharya panikkar
- Advertisement -

ಹೊಸದಿಲ್ಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ರಾಮ್​ ವಿಲಾಸ್​ ಪಾಸ್ವಾನ್​​ (74) ನಿಧನರಾಗಿದ್ದಾರೆ.


ತೀವ್ರ ಅನಾರೋಗ್ಯದಿಂದ ಕೆಲವು ದಿನಗಳಿಂದ ದೆಹಲಿಯ ಏಮ್ಸ್​ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಕಳೆದ ಕೆಲ ದಿನಗಳಿಂದ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ಇಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅವರ ಮಗ ಚಿರಾಗ್​ ಪಾಸ್ವಾನ್​ ಟ್ವೀಟ್ ಮಾಡಿದ್ದಾರೆ. ಏಮ್ಸ್​ ಆಸ್ಪತ್ರೆಯಲ್ಲಿ ಹೃದಯರೋಗ ಶಸ್ತ್ರಚಿಕಿತ್ಸೆಗೂ ರಾಮ್​ ವಿಲಾಸ್​ ಪಾಸ್ವಾನ್​ ಒಳಗಾಗಿದ್ದರು.

- Advertisement -

Related news

error: Content is protected !!