- Advertisement -
- Advertisement -



ಚಂದಳಿಕೆ: ಸೌತ್ ಕೆನರಾ ಅಸೋಸಿಯೇಷನ್ (ರಿ) ದ. ಕ ಬಂಟ್ವಾಳ ವಲಯದ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ನಡೆಯಿತು.
ಬಂಟ್ವಾಳ ವಲಯ ಅಧ್ಯಕ್ಷ ರೋ ಕಿಶೋರ್ ಬಂಟ್ವಾಳ ದೀಪಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೋಹನ್ ಕಾಯರ್ಮಾರ್ ಕೋಶಧಿಕಾರಿ ಚಂದಳಿಕೆ ವಿದ್ಯಾವರ್ಧಕ ಸಂಘ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಮುಡಿಪು, ಶಾಲಾ S D M Cಅಧ್ಯಕ್ಷೆ ಸುಮತಿ ದೇಜಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯ ಬಿ.ವಿಶ್ವನಾಥ್ ಗೌಡ ಸ್ವಾಗತಿಸಿದರು, ಸಹ ಶಿಕ್ಷಕ ವೆಂಕಟೇಶ್ ನಿರೂಪಿಸಿ ಧನ್ಯವಾದ ಸಮರ್ಪಸಿದರು.
- Advertisement -