








ಚಂದಳಿಕೆ: ಕಾರ್ತಿಕ್ ಫ್ರೆಂಡ್ಸ್ ಕ್ಲಬ್ (ರಿ.) ಚಂದಳಿಕೆ-ವಿಟ್ಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ , ಚಂದಳಿಕೆ ಇದರ ಆಶ್ರಯದಲ್ಲಿ 26ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮವು ಸೆ. 07ನೇ ಶನಿವಾರ ಮತ್ತು 08ನೇ ಆದಿತ್ಯವಾರದಂದು ’ಮಂಗಳಾ ಮಂಟ’ ಶ್ರೀ ರಾಮನಗರ, ಚಂದಳಿಕೆ, ವಿಟ್ಲ ಇಲ್ಲಿ ನಡೆಯಲಿದೆ.
ದಿನಾಂಕ 7-9-2024ನೇ ಶನಿವಾರದಂದು ಪೂರ್ವಾಹ್ನ 8-00ಕ್ಕೆ ಗಣಪತಿ ಹೋಮ ನಡೆದು ಬಳಿಕ ಪೂರ್ವಾಹ್ನ 9-15ಕ್ಕೆ ಮೂರ್ತಿ ಪ್ರತಿಷ್ಠೆ ನಡೆಯಲಿದೆ.
ಬೆಳಿಗ್ಗೆ 9-30ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ಇದರ ಅಧ್ಯಕ್ಷ ಶಂಕರಭಟ್ ಬದನಾಜೆ ವಹಿಸಲಿದ್ದಾರೆ. ವಿಧ್ಯಾವರ್ದಕ ಸಂಘ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ,ವಿಟ್ಲ ಇದರ ಅಧ್ಯಕ್ಷ ಭವಾನಿ ಕೆ. ರೈ ಕೊಲ್ಯ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಧ್ವಜಾರೋಹಣ ಕಾರ್ಯಕ್ರಮವನ್ನು ಪ್ರಗತಿಪರ ಕೃಷಿಕ ಪುರುಷೋತ್ತಮ ಭಟ್ ಬದನಾಜೆ ಇವರು ನೆರವೇರಿಸಲಿದ್ದಾರೆ. ಸಾರ್ವಜನಿಕ ಶ್ರೀ ಗಣೇಶೋತ್ಸವ ಗೌರವ ಸಮಿತಿ ಚಂದಳಿಕೆ ವಿಟ್ಲ ಇದರ ಕಾರ್ಯಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ ಮತ್ತು ವಿನೋದ್ ಶೃಂಗೇರಿ ಕ್ಯಾಂಪ್ಕೊ ಪುತ್ತೂರು ಇವರು ಉಪಸ್ಥಿತರಿರುವರು.
ಬೆಳಿಗ್ಗೆ 11-00ಕ್ಕೆ ಧೂಮಾವತಿ ಸ್ವ-ಸಹಾಯ ಸಂಘ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 11-30ರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ನಡೆದು ಬಳಿಕಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಘಂಟೆ 5-00ರಿಂದ ಶ್ರೀ ಮಹಾದೇವಿ ಮಹಿಳಾ ಭಜನಾ ಮಂಡಳಿ ಕಬಕ ಇವರಿಂದ ಭಜನಾ ಕಾರ್ಯಕ್ರಮ ನಡೆದು ಸಂಜೆ 6-30ರಿಂದ ಬಹುಮಾನ ವಿತರಣೆ ನಡೆಯಲಿದೆ. ರಾತ್ರಿ 7-00ರಿಂದ ರಂಗಸಿರಿ ಸಾಂಸ್ಕೃತಿ ವೇದಿಕೆ ( ರಿ. ) ಬದಿಯಡ್ಕ ಹಾಗೂ ಯಕ್ಷರಂಜಿನಿ ಕಲಾ ಕೇಂದ್ರ ನೀರ್ಚಾಲು ಇವರ ಸಹಯೋಗದಲ್ಲಿ ಪ್ರಸಂಗ – ಮೋಕ್ಷ ಸಂಗ್ರಾಮ ಎಂಬ ಯಕ್ಷಗಾನ ಬಯಲಾಟ ನಡೆದು ಬಳಿಕ ರಾತ್ರಿ 8-00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.
ದಿನಾಂಕ 8-9-2024 ನೇ ಆದಿತ್ಯವಾರ ಪೂರ್ವಾಹ್ನ 8-00ಕ್ಕೆ ಗಣಪತಿ ಹೋಮ, ಬೆಳಿಗ್ಗೆ 8-30ಕ್ಕೆ ಬೆಳಗಿನ ಪೂಜೆ ನಡೆದು ಬಳಿಕ ಬೆಳಿಗ್ಗೆ 9-00ರಿಂದ ವಿಶ್ವನಾಥ ದೇವಾಡಿಗ ಮತ್ತು ಬಳಗ ವಿಟ್ಲ ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ10-30ಕ್ಕೆ ಸಾರ್ವಜನಿಕರಿಗೆ ಹಗ್ಗಾಜಗ್ಗಾಟ ಸ್ಪರ್ಧೆ ನಡೆಯಲಿದೆ. ಮಧ್ಯಾಹ್ನ 12-30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3-00ಕ್ಕೆ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣಾ ಕಾರ್ಯಕ್ರಮ ನಡೆದು ಬಳಿಕ ಸಂಜೆ 5-00ಕ್ಕೆ ಚಲಿಸುವ ರಸಮಂಜರಿ ವಿಶೇಷ ಆಕರ್ಷಣೆಯೊಂದಿಗೆ ಶೋಭಾಯಾತ್ರೆ ನಡೆಯಲಿದೆ.








