



ಚಂದಳಿಕೆ: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವಕೇಸರಿ ಅಬೀರಿ-ಅತಿಕಾರಬೈಲು(ರಿ.) ಚಂದಳಿಕೆ ದಶಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಯುವಕೇಸರಿ ಸಂಭ್ರಮ 2024-2025 ಫೆ. 2ನೇ ಶನಿವಾರ ಸಂಜೆ 6:00ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ವಿಟ್ಲ ಇಲ್ಲಿ ನಡೆಯಲಿದೆ.


ಸಂಜೆ 6:00ಕ್ಕೆ ಶ್ರೀ ಶಾರದಾ ಅಂಧರ ಗೀತಗಾಯನ ಕಲಾ ಸಂಘ (ರಿ.) ಮಂಗಳೂರು ಇವರಿಂದ ಸರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7:00ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ವನಿತ್ ಸಾಲಿಯಾನ್ ಅಬೀರಿ ಅಧ್ಯಕ್ಷರು ಯುವಕೇಸರಿ ಅಬೀರಿ-ಅತಿಕಾರಬೈಲು(ರಿ.) ಚಂದಳಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮಂಗಳೂರು ಲೋಕಸಬಾ ಕ್ಷೇತ್ರ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು, ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಎಸ್,ಎಲ್,ವಿ ಗ್ರೂಪ್ ಮೈಸೂರು ವಿವಾಕರ್ ದಾಸ್ ನೇರ್ಲಾಜೆ, ಹಿಂದೂ ಧಾರ್ಮಿಕ ಮುಂಖಡ ಅರುಣ್ ಕುಮಾರ್ ಪುತ್ತಿಲ, ಚಯರ್‌ಮೆನ್ ದಿಗ್ವಿಜಯ ಗ್ರೂಪ್ ISO 9001-2025 ಇಂಡಿಯಾ, ದುಬೈ, ಸಿಂಗಪೂರ್ ಮತ್ತು ಶ್ರೀಲಂಕಾ ಎಮ್, ಎನ್, ದಿನಕರ ಭಟ್ ಮಾವೆ, ವಿಟ್ಲ ವಕೀಲರು, ರೋಟರಿ ಕ್ಲಬ್ ಉಪಗವರ್ನರ್ ಪಪಿ. ಜಯರಾಮ ರೈ, ವಿದ್ಯಾವರ್ಧಕ ಸಂಘ (ರಿ.) ಚಂದಳಿಕೆ ಶಾಲೆ ಅಧ್ಯಕ್ಷ ಭವಾನಿ ರೈ ಕೊಲ್ಯ, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ರಕ್ಷಿತಾ ಸನತ್ ಸಾಲಿಯಾನ್ ಚಂದಳಿಕೆ, ಸಮರ್ಪಣ್ ವಿಟ್ಲ ಮತ್ತು ಶ್ರೀ ಮಹಾಗಣಪತಿ ಕನ್‌ಸ್ಟ್ರಕ್ಷನ್ಸ್ ಮತ್ತು ಅರ್ಥ್‌ಮೂವರ್‍ಸ್ ಅಧ್ಯಕ್ಷ ಎನ್ ಯಶವಂತ ಪೂಜಾರಿ, ಚಂದಳಿಕೆ ಶಾಲೆ ಶಾಲಾಭಿವೃಧ್ದಿ ಸಮಿತಿ ಅಧ್ಯಕ್ಷ ಸುಮಾ ದೇಜಪ್ಪ, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಅದ್ಯಕ್ಷ ಪುನೀತ್ ಮಾಡತ್ತಾರು, ಪ್ರಗತಿಪರ ಕೃಷಿಕ ಚೇತನ್ ಪೂಜಾರಿ ಮರುವಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುವಕೇಸರಿ ಅಬೀರಿ- ಅತಿಕಾರಬೈಲು(ರಿ.) ಚಂದಳಿಕೆ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂಜಾರಿ ಪಟ್ಲ ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ) ಶೇಖರ ಪರವ ಎರ್ಮನಿಲೆ, (ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ) ಗೋಪಾಲ ಜೋಗಿ ಕಾಪುಮಜಲು, (ಜಿಲ್ಲಾ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕೃತ) ಚಂದ್ರಶೇಖರ ಗೌಡ ಗಿರಿನಿವಾಸ, (ಉದ್ಯಮದ ಜೊತೆ ಸಮಾಜ ಸೇವೆ) ತಾರನಾಥ ಸಾನ್ವಿ ಕನ್‌ಸ್ಟ್ರಕ್ಷನ್ಸ್ ವಿಟ್ಲ, (ಅಂತರಾಷ್ಟ್ರೀಯ ಮಟ್ಟದ ಹ್ಯಾಂಡಬಾಳ್ ತಂಡದ ತರಬೇತುದಾರರಾಗಿ ನೇಪಾಳದಲ್ಲಿ ಭಾರತ ತಂಡಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟವರು) ಶ್ರೀನಿವಾಸ ಗೌಡ ನೆಕ್ಕಿಲಾರು ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.
ಬಳಿಕ ರಾತ್ರಿ 7:45ಕ್ಕೆ ಅನ್ನಸಂತರ್ಪಣೆ ನಡೆದು ಬಳಿಕ ರಾತ್ರಿ 8:00ಕ್ಕೆ ಚೈತನ್ಯ ಕಲಾವಿದರು ಬೈಲೂರು ಪ್ರಸನ್ನ ಶೆಟ್ಟಿ ಬೈಲೂರು ಇವರ ’ಅಷ್ಟೆಮಿ’ ಸಾಂಸಾರಿಕ ತುಳು ನಾಟಕ ನಡೆಯಲಿದೆ.