Tuesday, March 2, 2021

ಕಾಂಗ್ರೆಸ್ ಮುಖಂಡ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಬೋಳಂತೂರು ನಿಧನ

ಬಂಟ್ವಾಳ: ಕಾಂಗ್ರೆಸ್ ಮುಖಂಡ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಲ|ಚಂದ್ರಹಾಸ ಶೆಟ್ಟಿ ಬೋಳಂತೂರು ಅವರು ಇಂದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ದೀರ್ಘಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಯೇ ಇದ್ದ ಅವರು ಇಂದು ಮೃತರಾಗಿದ್ದಾರೆ.ಇವರು ಸಾಮಾಜಿಕವಾಗಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಜೊತೆಗೆ ಧಾರ್ಮಿಕವಾಗಿ ಹೆಚ್ಚುಗುರುತಿಸಿ ಕೊಂಡಿದ್ದರು. ಬೋಳಂತೂರು ಕೊಡಿಯಡ್ತಾಯಿ ದೇವಳದ ಅಧ್ಯಕ್ಷರು, ಬಿಸಿರೋಡಿನ ಪೋಲೀಸ್ ಲೈನ್ ನಲ್ಲಿರುವ ಅನ್ನಪೂರ್ಣೇಶ್ವರಿ ದೇವಾಲಯದ ನಿರ್ಮಾಣ ಹಾಗೂ ಬ್ರಹ್ಮಕಲಶದ ಉಸ್ತುವಾರಿ ವಹಿಸಿದ್ದರು.

ಅನೇಕ ಧಾರ್ಮಿಕ ಹಾಗೂ ಜನಪರ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸು ಗೆದ್ದ ಅವರು ವೀರಕಂಬ ಗ್ರಾ.ಪಂ.ಅಧ್ಯಕ್ಷರಾಗಿ ತಾಲೂಕು ಪಂಚಾಯತ್ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳು ಇವರ ಅವಧಿಯಲ್ಲಿ ಆಗಿವೆ.

- Advertisement -

MOST POPULAR

HOT NEWS

Related news

error: Content is protected !!