Sunday, July 6, 2025
spot_imgspot_img
spot_imgspot_img

ಚೀನಾದ ಚಂದ್ರಶೋಧಕ ನೌಕೆ ‘ಚಾಂಗೆ-5’ ಯಶಸ್ವಿಯಾಗಿ ಭೂಸ್ಪರ್ಶ!!

- Advertisement -
- Advertisement -

ಬೀಜಿಂಗ್: ಚೀನಾದ ಮಾನವರಹಿತ ಚಂದ್ರಶೋಧಕ ನೌಕೆ ‘ಚಾಂಗೆ-5’ ಚಂದ್ರನ ಮೇಲ್ಮೈನಿಂದ ಕಲ್ಲು ಮತ್ತು ಮಣ್ಣಿನ ಮಾದರಿಗಳನ್ನು ಹೊತ್ತು ತಂದಿದೆ.

‘ಚಾಂಗೆ-5’ ಗುರುವಾರ ಮುಂಜಾನೆ ಸುರಕ್ಷಿತವಾಗಿ ಭೂಮಿಗೆ ಮರಳಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ನಾಲ್ಕು ದಶಕಗಳಲ್ಲೇ ಚಂದ್ರನಿಂದ ಭೂಮಿಗೆ ಮಾದರಿಗಳನ್ನು ಹೊತ್ತು ತಂದ ಮೊದಲ ನೌಕೆಯಾಗಿದೆ.
ಮಾದರಿಗಳನ್ನು ಹೊತ್ತ ಕ್ಯಾಪ್ಸೂಲ್ ಉತ್ತರ ಚೀನಾದ ಇನ್ನರ್ ಮಂಗೋಲಿಯ ವಲಯದಲ್ಲಿ ಭೂಸ್ಪರ್ಶ ಮಾಡಿತು ಎಂದು ಚೀನಾ ನ್ಯಾಶನಲ್ ಸ್ಪೇಸ್ ಅಡ್ಮಿನಿಸ್ಟ್ರೇಶನ್ ಮೂಲಗಳನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.

ಚಂದ್ರನಿಂದ ಮಾದರಿಗಳನ್ನು ತಂದ ಮೂರನೇ ದೇಶವಾಗಿ ಚೀನಾ ಹೊರಹೊಮ್ಮಿದೆ. 1960 ಮತ್ತು 1970ರ ದಶಕಗಳಲ್ಲಿ ಅಮೆರಿಕ ಮತ್ತು ರಶ್ಯಗಳು ಈ ಸಾಧನೆಯನ್ನು ಮಾಡಿವೆ.

ಚೀನಾದ ಚಂದ್ರ ದೇವತೆಯ ಹೆಸರನ್ನು ಹೊಂದಿರುವ ಚಂದ್ರಶೋಧಕ ನೌಕೆ ಚಾಂಗೆ-5 ನವೆಂಬರ್ 23ರಂದು ಭೂಮಿಯಿಂದ ಉಡಾವಣೆಗೊಂಡಿತ್ತು ಹಾಗೂ ಡಿಸೆಂಬರ್ 1ರಂದು ಚಂದ್ರನ ಮೇಲೆ ಇಳಿದಿತ್ತು. ಅದು ಚಂದ್ರನ ಮೇಲೆ ಚೀನಾದ ಧ್ವಜವನ್ನು ಹಾರಿಸಿದೆ ಎಂದು ದೇಶದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

- Advertisement -

Related news

error: Content is protected !!