Tuesday, April 23, 2024
spot_imgspot_img
spot_imgspot_img

ನೈಟ್ ಕರ್ಫ್ಯೂನಲ್ಲಿ ಬದಲಾವಣೆ

- Advertisement -G L Acharya panikkar
- Advertisement -

ಬೆಂಗಳೂರು: ನೈಟ್​ ಕರ್ಫ್ಯೂನಿಂದಾಗಿ ಕ್ರಿಸ್ಮಸ್​ ಮತ್ತು ಹೊಸ ವರ್ಷಾಚರಣೆ ಸಮಯದ ಅಧಿಕ ವಹಿವಾಟಿಗೆ ಹೊಡೆತ ಬೀಳಲಿದೆ ಈ ಹಿನ್ನಲೆಯಲ್ಲಿ ಈ ಕರ್ಫ್ಯೂ ಅವಧಿಯನ್ನು ಒಂದೂವರೆ ಗಂಟೆಗಳ ಕಾಲ ತಡವಾಗಿ ಹೇರುವಂತೆ ಬಾರ್​ ಅಂಡ್​ ರೆಸ್ಟೋರೆಂಟ್​ ಮಾಲೀಕರ ಬೇಡಿಕೆಯ ಸತ್ಯತೆಯನ್ನು ಮನಗಂಡ ಸರ್ಕಾರ ಕೆಲವೊಂದು ಬದಲಾವಣೆ ತಂದಿದೆ . ಅದರಂತೆ ಇಂದಿನಿಂದ ಬದಲು ನಾಳೆಯಿಂದ ಅಂದರೆ ಡಿ. 24ರಿಂದ ಜ. 1ರವರೆಗೆ ನೈಟ್​ ಕರ್ಫ್ಯೂ ಜಾರಿ ಮಾಡಲಾಗಿದೆ. ರಾತ್ರಿ 10ರ ಬದಲು ರಾತ್ರಿ 11 ರಿಂದ ಬೆಳಿಗ್ಗೆ 5ರವರೆಗೆ ಈ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಸಿಎಂ ಬಿಎಸ್​ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಈ ನೈಟ್​ ಕರ್ಫ್ಯೂ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಡಿ. 24ರಂದು ನಡೆಯಲಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ಕ್ರಮ ವಹಿಸಲಾಗಿದೆ. ಈ ಸಂದರ್ಭದಲ್ಲಿ ಮಿಡ್​ನೈಟ್​ ಮಾಸ್​ಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ನೈಟ್​ ಕರ್ಫ್ಯೂ ವೇಳೆ ಅಗತ್ಯ ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗೆ ನಿರ್ಬಂಧ ವಿಧಿಸಲಾಗಿದೆ. ಬಸ್ಸು, ರೈಲು, ವಿಮಾನ ಸಂಚಾರಕ್ಕೆ ಯಾವುದೇ ನಿರ್ಬಂಧ ಇಲ್ಲ. ಆಟೋ, ಟ್ಯಾಕ್ಸಿ, ಗಳಿಗೆ ಪಿಕಪ್- ಡ್ರಾಪ್ ಗಳಿಗೆ ಅನುಮತಿ ನೀಡಲಾಗಿದೆ.  ಗೂಡ್ಸ್ ವಾಹನ, ಖಾಲಿ ವಾಹನ ಗಳು, ಟ್ರಕ್ಸ್​ಗಳು ಸಂಚಾರ ಮಾಡಬಹುದು. ರಾತ್ರಿ ಪಾಳಿಯಲ್ಲಿ ಶೇಕಡಾ 50 ರಷ್ಟು ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿಸಬಹುದಾಗಿದ್ದು, ಇವರಿಗೆ ಐಡಿ ಕಾರ್ಡ್​ ಕಡ್ಡಾಯವಾಗಿ ನೀಡಬೇಕು. ದೂರದ ಪ್ರಯಾಣ ಮಾಡಲು ಯಾವುದೇ ನಿರ್ಬಂಧ ಇಲ್ಲ. ಅವರು ಎಂದಿನಂತೆ ಪ್ರಯಾಣ ಮಾಡಬಹುದು. ಇನ್ನುಳಿದಂತೆ ಬಾರ್ ಅಂಡ್ ರೆಸ್ಟೋರೆಂಟ್ ಗಳಿಗೆ‌ ನಿರ್ಬಂಧ ವಿಧಿಸಲಾಗಿದೆ.

- Advertisement -

Related news

error: Content is protected !!