Thursday, June 11, 2026
spot_imgspot_img
spot_imgspot_img

ಮೈಸೂರಿನಲ್ಲಿ 3 ಚಿರತೆ ಶವ ಪತ್ತೆ: ವಿಷ ಹಾಕಿ ಕೊಲೆ ಶಂಕೆ!

- Advertisement -
- Advertisement -

ಮೈಸೂರು: ಮೈಸೂರಿನ ಬೆಳವಾಡಿ ಬಯಲು ಪ್ರದೇಶದಲ್ಲಿ ಮೂರು ಚಿರತೆಗಳ ಶವಪತ್ತೆಯಾಗಿದ್ದು, ದುಷ್ಕರ್ಮಿಗಳು ವಿಷ ಹಾಕಿ ಕೊಂದಿರುವ ಶಂಕೆ ವ್ಯಕ್ತವಾಗಿದೆ.

ಎರಡು ದಿನಗಳ ಹಿಂದಷ್ಟೇ ಬೆಮೆಲ್ ಕಾರ್ಖಾನೆಯ ಕಾಂಪೌಂಡ್ ಬಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ತಾಯಿ ಚಿರತೆ ಹಾಗೂ ಎರಡು ಚಿರತೆ ಮರಿಗಳು ಮೃತಪಟ್ಟಿವೆ.

ತಿನ್ನುವ ಆಹಾರದಲ್ಲಿ ವಿಷ ಬೆರಸಿ ದುಷ್ಕರ್ಮಿಗಳು ಚಿರತೆಗಳಿಗೆ ವಿಷ ಪ್ರಾಶನ ಮಾಡಿರಬಹುದು ಎಂದು ಅರಣ್ಯ ಇಲಾಖೆ ಅನುಮಾನ ವ್ಯಕ್ತಪಡಿಸಿದೆ.

ತಾಯಿ ಚಿರತೆ ಹಾಗೂ ಚಿರತೆ ಮರಿಗಳು ಒಟ್ಟೊಟ್ಟಿಗೆ ಓಡಾಡುತ್ತಿದ್ದರಿಂದ ಬೆಮೆಲ್ ಫ್ಯಾಕ್ಟರಿ, ಬೆಳವಾಡಿ ಸುತ್ತ ಭಯಭೀತರಾಗಿದ್ದ ಜನ ಭೀತರಾಗಿದ್ದು, ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಶವಗಳ ಮರಣೋತ್ತರ ಪರೀಕ್ಷೆಗೆ ಚಿರತೆಗಳ ಮೃತದೇಹ ಕಳುಹಿಸಿಕೊಡಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ.

- Advertisement -

Related news

error: Content is protected !!