Thursday, March 28, 2024
spot_imgspot_img
spot_imgspot_img

ಕೊತಕೊತ ಕುದಿಯುತ್ತಿದ್ದ ಚಿಕನ್‍ಸೂಪ್‍ನ ಬಾಣಲೆಗೆ ಬಿದ್ದು ಬೆಂದುಹೋದ ಬಾಣಸಿಗ

- Advertisement -G L Acharya panikkar
- Advertisement -

ಇರಾಕ್: ಔತಣಕೂಟವೊಂದರಲ್ಲಿ ಚಿಕನ್ ಸೂಪ್ ತಯಾರು ಮಾಡುತ್ತಿರುವ ವೇಳೆ ಭಾಣಸಿಗ ಬಾಣಲೆಗೆ ಬಿದ್ದು ಸಾವನ್ನಪ್ಪಿದ ಘಟನೆ ಇರಾಕ್‍ನಲ್ಲಿ ನಡೆದಿದೆ. 25 ವರ್ಷಗಳಿಂದ ಬಾಣಸಿಗ ವೃತ್ತಿಯಲ್ಲಿರುವ ಇಸ್ಮಾಯಿಲ್ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.

ಜಾಕೋ ಪ್ರದೇಶದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಈ ದುರಂತ ಸಂಭವಿಸಿದೆ. ಅದ್ಧೂರಿ ಮದುವೆ ಸಮಾರಂಭದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಈ ಸಮಯದಲ್ಲಿ ಬಾಣಸಿಗರ ಬೃಹತ್ ಗುಂಪು ವಿವಿಧ ಖಾದ್ಯಗಳನ್ನು ತಯಾರಿಸುತ್ತಿತ್ತು. ಆ ಸಮಯದಲ್ಲಿ ಬಾಣಸಿಗನೊಬ್ಬ ಚಿಕನ್ ಸೂಪ್ ತಯಾರಿಸುತ್ತಿದ್ದ.

ಊಟ ಬಡಿಸಲು ಎಲ್ಲಾ ಸಿದ್ಧತೆ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಬಾಣಸಿಗ ಇದ್ದಕ್ಕಿದ್ದಂತೆಯೇ ಕಾಲುಜಾರಿ ಬಾಣಲೆಯಲ್ಲಿ ಬಿದ್ದುಬಿಟ್ಟಿದ್ದಾನೆ. ಬಾಣಲೆ ಎಷ್ಟು ಬಿಸಿಯಾಗಿತ್ತು ಎಂದರೆ ಅದರಲ್ಲಿಯೇ ಬೆಂದುಹೋಗಿದ್ದಾನೆ, ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಬದುಕಿ ಉಳಿಯಲಿಲ್ಲ.

- Advertisement -

Related news

error: Content is protected !!