Sunday, May 19, 2024
spot_imgspot_img
spot_imgspot_img

ಚೆನ್ನೈ: ವಿಶ್ವದ ಎರಡನೇ ಅತೀ ದೊಡ್ಡ ಆಮೆ ಕಳ್ಳತನ!!

- Advertisement -G L Acharya panikkar
- Advertisement -

ಚೆನ್ನೈ: ವಿಶ್ವದಲ್ಲೇ ಎರಡನೇ ಅತೀ ದೊಡ್ಡ ಆಮೆ ಎಂಬ ಖ್ಯಾತಿ ಪಡೆದಿದ್ದ ಅಲ್ಡಬ್ರಾ ಆಮೆ ಕಳ್ಳತನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತಮಿಳುನಾಡಿದ ಚೆನ್ನೈನಿಂದ 56 ಕಿಮೀ ದೂರದ ಮಹಾಬಲಿಪುರಂನಲ್ಲಿರೋ ಮೊಸಳೆಗಳ ಪಾರ್ಕ್​​​ನಿಂದ ಆಮೆ ಕಳ್ಳತನವಾಗಿದೆ.

ಕಳೆದ 6 ವಾರಗಳ ಹಿಂದೆಯೇ ಆಮೆಯ ಕಳ್ಳತನವಾಗಿದ್ದು. ಸದ್ಯ ಈ ಮಾಹಿತಿ ಬಹಿರಂಗವಾಗಿದೆಘಟನೆ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದು, ಕಳ್ಳತನವಾಗಿರುವ ಆಮೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹10 ಲಕ್ಷಕ್ಕೂ ಹೆಚ್ಚಿನ ಬೆಲೆಯಿದೆ ಎನ್ನಲಾಗಿದೆ. ಪಾರ್ಕ್​​​​ನಲ್ಲಿ ಕೆಲಸ ಮಾಡುವ ಸಿಬ್ಬಂದಿಯೇ ಕೃತ್ಯಕ್ಕೆ ಸಹಕಾರ ನೀಡಿರಬಹುದು. ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗದಂತೆ ಪ್ಲಾನ್ ಮಾಡಿ ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾರ್ಕ್​​ನಲ್ಲಿ ಮೊಸಳೆಗಳೊಂದಿಗೆ ಹಾವು ಹಾಗೂ ಆಮೆಗಳು ಇದ್ದು, ಸದ್ಯ ನಾಪತ್ತೆಯಾಗಿರುವ ಆಮೆ, ಅಲ್ಡಬ್ರಾ ಜಾತಿಗೆ ಸೇರಿದೆ. 50 ವರ್ಷ ವಯಸ್ಸಿನ ಆಮೆ 80 ರಿಂದ 100 ಕೆಜಿ ತೂಕ ಹೊಂದಿತ್ತು. ಇದುವರೆಗೂ ಪಾರ್ಕ್​ನಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎನ್ನಲಾಗಿದೆ. ಭೂಮಿಯ ಮೇಲೆ ಅತೀ ಹೆಚ್ಚು ವರ್ಷ ಜೀವಿಸಬಲ್ಲ ಪ್ರಾಣಿ ಎಂಬ ಹೆಗ್ಗಳಿಕೆಯನ್ನು ಅಲ್ಡಬ್ರಾ ಆಮೆಗಳು ಪಡೆದಿದ್ದು, 150 ವರ್ಷಗಳವರೆಗೂ ಜೀವಿಸುವ ಸಾಮರ್ಥ್ಯವನ್ನ ಹೊಂದಿವೆ. 105 ಮೀಟರ್​ ಉದ್ದ ಬೆಳೆಯಬಹುದಾಗಿದ್ದು, 200 ಕೆ.ಜಿ. ವರೆಗೂ ತೂಕವಿರುತ್ತದೆ.

- Advertisement -

Related news

error: Content is protected !!