Thursday, July 23, 2026
spot_imgspot_img
spot_imgspot_img

sslc ಪರೀಕ್ಷೆ ಬರೆದ ನಕಲಿ ವಿದ್ಯಾರ್ಥಿಗಳು: ಯುವತಿ ಸೇರಿ 6 ಜನರ ಬಂಧನ

- Advertisement -
- Advertisement -
vtv vitla

ಚಿಕ್ಕೋಡಿ: sslc ಪರೀಕ್ಷೆಯ ಮೊದಲ ದಿನದಂದೇ ಪರೀಕ್ಷೆ ಬರೆಯಲು ಬಂದಂತ ಯುವತಿ ಸೇರಿ 6ನಕಲಿ ವಿದ್ಯಾರ್ಥಿಗಳನ್ನು ಚಿಕ್ಕೋಡಿಯ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಆರ್ ಡಿ ಕಾಲೇಜಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರಕ್ಕೇ, ಇಂದು ಅಸಲಿ ಅಭ್ಯರ್ಥಿಗಳ ಬದಲಾಗಿ, ನಕಲಿ 6 ಅಭ್ಯರ್ಥಿಗಳು ಪರೀಕ್ಷೆ ಬರೆಯೋದಕ್ಕಾಗಿ ತೆರಳಿದ್ದರು.

ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳ ಪ್ರವೇಶ ಪತ್ರ ಪರೀಕ್ಷಿಸಿ, ಒಳ ಬಿಡುವಂತ ಸಂದರ್ಭದಲ್ಲಿ ನಕಲಿ ವಿದ್ಯಾರ್ಥಿಗಳು ಸಿಕ್ಕಿಬಿದ್ದಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು 6 ನಕಲಿ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ವಶಕ್ಕೆ ಪಡೆದಿರುವಂತ ನಕಲಿ ವಿದ್ಯಾರ್ಥಿಗಳನ್ನು ರಾಹುಲ್, ಭೀಮಶಿ ಹುಲಕುಂದ, ಕಾರ್ತಿಕ್ ಲಚ್ಚಪ್ಪ ಕುಂಬಾರ್, ಸಿದ್ಧು ಮಾದೇವ್ ಜೋಗಿ, ಮಾಂತೇಶ್ ಸಂಗಪ್ಪ ಡೊಳ್ಳಿನವರ ಹಾಗೂ ಸವೀತಾ ಮಾದೇವ ಹೊಸೂರು ಎಂದು ಗುರುತಿಸಲಾಗಿದೆ. ಈ ಸಂಬಂಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

vtv vitla
vtv vitla
- Advertisement -

Related news

error: Content is protected !!