Sunday, January 16, 2022
spot_imgspot_img
spot_imgspot_img

ಕಣ್ಣೆದುರೇ ಆರೋಗ್ಯ ಕೇಂದ್ರದ ನೌಕರ ನರಳಾಡುತ್ತಿದ್ದರೂ ಸಹಾಯಕ್ಕೆ ಬಾರದ ಶಾಸಕ!

- Advertisement -
- Advertisement -

ಚಿಕ್ಕಮಗಳೂರು: ಲಕ್ಕವಳ್ಳಿಯ ಆರೋಗ್ಯ ಕೇಂದ್ರದ ನೌಕರ ರಮೇಶ್‌ಕುಮಾರ್‌ ಅವರು ತರೀಕೆರೆ ಸಮೀಪ ಲಕ್ಕವಳ್ಳಿ ಕ್ರಾಸ್‌ನಲ್ಲಿ ಟೌನ್‌ ಕ್ಲಬ್‌ ಬಳಿ ಬೈಕಿನಿಂದ ಬಿದ್ದು ರಸ್ತೆಯಲ್ಲಿ ಒದ್ದಾಡುತ್ತಿದ್ದರೂ, ಪಕ್ಕದಲ್ಲೇ ಕಾರಿನಲ್ಲಿ ಕುಳಿತಿದ್ದ ಶಾಸಕ ಡಿ.ಎಸ್‌.ಸುರೇಶ್‌ ಸಹಾಯಕ್ಕೆ ಬಂದಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಮೇಶ್‌ಕುಮಾರ್‌ ಗಾಯಗೊಂಡು ಒದ್ದಾಡುತ್ತಿರುವ ಮತ್ತು ಪಕ್ಕದಲ್ಲಿ ಕಾರಿನಲ್ಲಿ ಶಾಸಕ ಸುರೇಶ್‌ ಇರುವ ವಿಡಿಯೋ ವೈರಲ್‌ ಆಗಿದ್ದು, ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.

ಎಂಎಲ್‌ಎ ಕಾರು ಇದ್ದು, ಅವರು ಕಾರಲ್ಲೇ ಗಾಯಾಳುವನ್ನು ಆಸ್ಪತ್ರೆಗೆ ಒಯ್ಯಬಹುದು. ಎಂಎಲ್‌ಎ ಒಳಗೆ ಕುಳಿತಿರುವವರು ಹೊರಗೆ ಬರುತ್ತಿಲ್ಲ ಎಂದು ಒಬ್ಬರು ಹೇಳುವುದು. ಆಂಬುಲೆನ್ಸ್‌ಗೆ ಫೋನ್‌ ಮಾಡಿದ್ದೇವೆ, ಬರುತ್ತದೆ ಎಂದು ಮತ್ತೊಬ್ಬರು ಹೇಳುವುದು ವಿಡಿಯೋದಲ್ಲಿದೆ. ರಮೇಶ್‌ ಅವರನ್ನು ಆಂಬುಲೆನ್ಸ್‌ನಲ್ಲಿ ಶಿವಮೊಗ್ಗಕ್ಕೆ ಆಸ್ಪತ್ರೆಗೆ ಕರೆದೊಯ್ದಿದ್ದು, ಆದರೆ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

- Advertisement -

Related news

error: Content is protected !!