Friday, May 3, 2024
spot_imgspot_img
spot_imgspot_img

ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಮಗು: ಗಂಭೀರ ಗಾಯ ..!

- Advertisement -G L Acharya panikkar
- Advertisement -

ಪ್ರೀ ಸ್ಕೂಲ್‌ನ ಮೂರನೇ ಮಹಡಿಯಿಂದ ಕೆಳಗೆ ಬಿದ್ದ ಪರಿಣಾಮ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.

ಗಂಭೀರ ಗಾಯಗೊಂಡ ಬಾಲಕಿ ಜಿನಾ ಅನ್ನಾ ಜಿಟೊ (4) ಎಂದು ಗುರುತತಿಸಲಾಗಿದೆ.

ಚೆಲ್ಲಕೇರಿಯ ಡೆಲ್ಲಿ ಪ್ರೀ ಸ್ಕೂಲ್‌ನಲ್ಲಿ ಈ ಘಟನೆ ಸಂಭವಿಸಿದ್ದು ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 3ನೇ ಮಹಡಿಯಿಂದ ಬಿದ್ದ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿದ್ದು ಶಾಲಾ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇರಳ ಮೂಲದವರಾದ ಬಾಲಕಿಯ ತಂದೆ ತಾಯಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು , ಪ್ರೀ ಸ್ಕೂಲ್‌ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗು ಐಸಿಯುಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದೆ.

- Advertisement -

Related news

error: Content is protected !!