- Advertisement -
- Advertisement -


ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ರೈ ಕೊಲ್ಯ ಇವರು ಅಧ್ಯಕ್ಷತೆ ವಹಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷೆ ಶ್ರೀಮತಿ ಸುಮತಿ ದೇಜಪ್ಪ, ಉಪಾಧ್ಯಕ್ಷ ಜಾಫರ್, ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ಶ್ರೀಮತಿ ರಕ್ಷಿತಾ ಸನತ್, ಶಾಲಾ ಮುಖ್ಯೋಪಾಧ್ಯಾಯ ಬಿ ವಿಶ್ವನಾಥ ಗೌಡ ಕುಳಾಲು ಮತ್ತಿತರರು ಉಪಸ್ಥಿತರಿದ್ದರು.

ಶಾಲಾ ವಾದ್ಯವೃಂಧ, RK Arts ಬೊಂಬೆಗಳೊಂದಿಗೆ ಮೆರವಣಿಗೆ ಮೂಲಕ ಮಕ್ಕಳಿಗೆ ಬಲೂನ್ ನೀಡಿ ಸ್ವಾಗತಿಸಲಾಯಿತು, ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಣೆ ನಡೆಯಿತು. ಸಿಹಿತಿಂಡಿಯೊಂದಿಗೆ ಮಧ್ಯಾಹ್ನದ ಭೋಜನವನ್ನು ನೀಡಲಾಯಿತು. ಸುರೇಶ್ ಶೆಟ್ಟಿ, ದೈಹಿಕ ಶಿಕ್ಷಕರು ಕರ‍್ಯಕ್ರಮ ನಿರ್ವಹಿಸಿದರು, ಶ್ರೀಮತಿ ರೇಷ್ಮಾ ಲೂವಿಸ್ ಧನ್ಯವಾದ ಗೈದರು.
- Advertisement -