Friday, July 4, 2025
spot_imgspot_img
spot_imgspot_img

ಚಂದಳಿಕೆ ಶಾಲೆಯಲ್ಲಿ ಮಕ್ಕಳ ಸಹಪಠ್ಯ ಶಿಬಿರ- ವಿಕಸನ 2025

- Advertisement -
- Advertisement -

ಚಂದಳಿಕೆ: ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕ ಮಕ್ಕಳ ಕಲಾಲೋಕ ಮತ್ತು ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ಬಂಟ್ವಾಳ ತಾಲೂಕು ಜಂಟಿ ಸಹಯೋಗದಲ್ಲಿ ಮಕ್ಕಳ ಸಹಪಠ್ಯ ಶಿಬಿರ ವಿಕಸನ 2025 ಕಾರ್ಯಕ್ರಮ ನಡೆಯಿತು.

ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಶ್ರೀಮತಿ ಭವಾನಿ ರೈ ಕೊಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಸೂಕ್ತ ಅವಕಾಶವನ್ನು ನೀಡಿದಾಗ ಅವರ ಸೂಪ್ತ ಪ್ರತಿಭೆಗಳನ್ನು ಹೊರಗೆಡಲು ವಿಕಸನ 2025 ಇಂತಹ ಸಹಪಠ್ಯ ಶಿಬಿರಗಳು ಸಹಕಾರಿಯಾಗಲಿದೆ ಎಂದು ಹೇಳಿದರು

ಚಂದಳಿಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಸಹಪಠ್ಯ ಶಿಬಿರ ನಡೆಯಲಿದೆ. ಮಕ್ಕಳ ಕಲಾಲೋಕದ ಅಧ್ಯಕ್ಷ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ಎಂ ಬಾಯರು ಶಿಬಿರ ನಿರ್ದೇಶಕರಾಗಿ ಶಿಬಿರವನ್ನು ಮುನ್ನಡೆಸಲಿದ್ದಾರೆ. ಬಂಟ್ವಾಳ ತಾಲೂಕಿನ ಸುಮಾರು 20 ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಭಾಗವಹಿಸಲಿದ್ದಾರೆ. 70 ವಿದ್ಯಾರ್ಥಿಗಳು ಶಿಬಿರದ ಪ್ರಯೋಜನವನ್ನು ಪಡೆಯಲಿದ್ದಾರೆ. ನಾಟಕ ಲೋಕ, ಕವನ ಲೋಕ, ವ್ಯಂಗ್ಯ ಚಿತ್ರ ಕಾಲ ಲೋಕ, ಹಾಡು ಅಭಿನಯ ಲೋಕ, ವೇಸ್ಟ್ ಟು ಟೇಸ್ಟ್ ಕಸದಿಂದ ರಸ ಲೋಕ, ಗೀತಾ ಗಾಯನ ಮತ್ತು ಕತೆ ರಚನಾ ಲೋಕ, ಪಕ್ಷಿ ಲೋಕ, ಮೂಢನಂಬಿಕೆಯ ಸುತ್ತ, ಮುಖವಾಡ ರಚನೆ ಹಾಗೂ ಒಳಾಂಗಣದ ಆಟಗಳು ನಡೆಯಲಿದೆ.

ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್, ಚಂದಳಿಕೆ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಮೋಹನ್ ಕಾಯರ್ ಮಾರ್, ಭಾರತ್ ಆಡಿಟೋರಿಯಂ ಮಾಲಕ ಸಂಜೀವ ಪೂಜಾರಿ, ಮೆಲ್ಕಾರ್ ಮಹಿಳಾ ಕಾಲೇಜ್‌ನ ಸಹಪ್ರಾಧ್ಯಾಪಕ ಎಂ.ಡಿ. ಮಂಚಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಬಿ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು, ಸಹ ಶಿಕ್ಷಕ ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಸಹಶಿಕ್ಷಕಿ ರೇಷ್ಮಾ ಲೂವಿಸ್ ವಂದಿಸಿದರು. ವೆಂಕಟೇಶ, ಪ್ರಸನ್ನ , ಪ್ರಿಯಾಂಕಾ, ರೆನಿಟಾ, ಸ್ವಾತಿ, ಕುಮಾರಿ ಚೈತನ್ಯ ಸಹಕರಿಸಿದರು.

- Advertisement -

Related news

error: Content is protected !!