- Advertisement -
- Advertisement -
ಚಿತ್ರದುರ್ಗ: ವಿಷಪೂರಿತ ಆಹಾರ ಸೇವನೆಯಿಂದ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದು, ಇಬ್ಬರು ಅಸ್ವಸ್ಥರಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮೃತಪಟ್ಟವರು ಇಸಾಮುದ್ರ ಗ್ರಾಮದಲ್ಲಿನ ತಿಪ್ಪಾ ನಾಯ್ಕ್(46), ಪತ್ನಿ ಸುಧಾಬಾಯಿ (43), ವೃದ್ಧೆ ಗುಂಡಿಬಾಯಿ(75). ಅಸ್ವಸ್ಥರಾದ ರಾಹುಲ್ (18), ರಮ್ಯ(16), ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಮನೆಯವರೆಲ್ಲರೂ ನಿನ್ನೆ ರಾತ್ರಿ ಮುದ್ದೆ , ಸಾರು ಸೇವನೆ ಮಾಡಿದ್ದು ,ಆ ಬಳಿಕ ಅಸ್ವಸ್ಥರಾಗಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇನ್ನಿಬ್ಬರು ಅಸ್ವಸ್ಥರಾಗಿದ್ದಾರೆ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.



- Advertisement -








