- Advertisement -
- Advertisement -
ಹೊಸದಿಲ್ಲಿ: ಪೂರ್ವ ಲಡಾಖ್‌ನ ಗಲ್ವಾನ್ ವ್ಯಾಲಿಯಲ್ಲಿ ಭಾರತದೊಂದಿಗೆ ಸಂಘರ್ಷಕ್ಕಿಳಿದಿದ್ದ ಚೀನಾಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಬಿಗ್ ಶಾಕ್ ನೀಡಿದೆ. ಟಿಕ್‌ಟಾಕ್ ಸೇರಿ 59 ಚೀನಾ ಆಪ್‌ಗಳನ್ನು ಭದ್ರತೆ ದೃಷ್ಟಿಯಿಂದ ದೇಶದಲ್ಲಿ ನಿಷೇಧ ಮಾಡಲು ಕೇಂದ್ರ ಸರಕಾರ ಆದೇಶಿಸಿದೆ.
ಇದರಿಂದ ಪದೇ ಪದೇ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿದ್ದ ಚೀನಾಗೆ ಕೇಂದ್ರ ದೊಡ್ಡ ಹೊಡೆತವನ್ನು ನೀಡಿದ್ದು ಟಿಕ್ ಟಾಕ್, ಶೇರ್ ಇಟ್, ಯುಸಿ ಬ್ರೌಸರ್ ಸಹಿತ ಹತ್ತಾರು ಜನಪ್ರಿಯ ಆಪ್ ಗಳು ಮಾಯವಾಗಲಿವೆ.
- Advertisement -