ಡೆಡ್ಲಿ ಕೊರೊನಾ ವೈರಸ್ ನ ತವರೂರು ಚೀನಾ. ಕೋವಿಡ್ ಹಾವಳಿಗೆ ಬಲಿಯಾದ ಚೀನಿಗರ ಸಂಖ್ಯೆಯನ್ನು ಇನ್ನೂ ಚೀನ ಅಧಿಕೃತವಾಗಿ ಬಿಟ್ಟುಕೊಟ್ಟಿಲ್ಲ. ಚೀನಾದ ವುಹಾನ್ ಮಾರ್ಕೆಟ್ ನಿಂದ ಹಬ್ಬಿದ ಈ ಮಹಾಮಾರಿ ಇಂದು ವಿಶ್ವದಾದ್ಯಂತ ವ್ಯಾಪಿಸಿದೆ. ಆದ್ರೆ ಚೀನಾದ ಕಡಲ ತೀರದಲ್ಲಿರುವ ಹಾಂಗ್ ಕಾಂಗ್ ನಲ್ಲಿ ಮಾತ್ರ ಕೊರೊನಾ ಸೋಂಕಿತರ ಸಂಖ್ಯೆ ತೀರಾ ಕಡಿಮೆ.
ಬರೋಬ್ಬರಿ ಮೂರು ತಿಂಗಳ ಬಳಿಕ ಇಲ್ಲಿ 24 ಹೊಸ ಪ್ರಕರಣಗಳು ಪತ್ತೆಯಾಗಿವೆ. ಅಂದ್ರೆ ವಯೋವೃದ್ಧರ ಆರೈಕೆ ಮನೆಯಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿವೆ. ಸುಮಾರು 3 ತಿಂಗಳ ಬಳಿಕ ಒಂದೇ ದಿನ 24 ಪ್ರಕರಣ ಪತ್ತೆಯಾಗಿವೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಇದರಲ್ಲಿ 19 ಸ್ಥಳೀಯ ಪ್ರಕರಣಗಳಾಗಿದ್ದು, ಈ ಪೈಕಿ 11 ಸೋಂಕಿತರ ಮೂಲಗಳು ಪತ್ತೆಯಾಗಿದ್ದರೆ, 5 ಮಂದಿಯ ಸೋಂಕಿನ ಮೂಲ ಪತ್ತೆಯಾಗಿಲ್ಲ ಎಂದು ಆರೋಗ್ಯ ಸಂರಕ್ಷಣಾ ಕೇಂದ್ರದ (ಸಿಎಚ್ಪಿ) ಸಂವಹನ ರೋಗ ಶಾಖೆಯ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ.
ಮತ್ತೊಂದು ಅಚ್ಚರಿ ವಿಷಯವೇನೆಂದರೆ ಚೀನಾ ಭಾಗದಲ್ಲಿ ಕೊರೊನಾ ಸೋಂಕು ಹರಡಿ 8 ತಿಂಗಳುಗಳೇ ಕಳೆದರೂ ಹಾಂಗ್ ಕಾಂಗ್ ನಲ್ಲಿ ಮಾತ್ರ ಇದುವರೆಗೆ ಪತ್ತೆಯಾದ ಕೊರೊನಾ ಸೋಂಕಿತರ ಸಂಖ್ಯೆ 1,323. ಇನ್ನು ಸಾವನ್ನಪ್ಪಿದವರ ಸಂಖ್ಯೆ 7 ಎಂದು ತಿಳಿದುಬಂದಿದೆ.