- Advertisement -
- Advertisement -
ತಪ್ಪು ಮಾಹಿತಿ ನೀಡುತ್ತಿದ್ದ 2500ಕ್ಕೂ ಹೆಚ್ಚು ಚೀನಾದ ಯೂಟ್ಯೂಬ್ ಚಾನೆಲ್ ಗಳನ್ನು ಗೂಗಲ್ ಡಿಲೀಟ್ ಮಾಡಿದೆ. ಈ ಬಗ್ಗೆ ಗೂಗಲ್ ಮಾಹಿತಿ ನೀಡಿದ್ದು, ಚೀನಾಕ್ಕೆ ಸಂಬಂಧಿಸಿ ನಡೆಸುತ್ತಿರುವ ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಚಾನೆಲ್ ಗಳಲ್ಲಿ ರಾಜಕೀಯೇತರ ವಿಚಾರಗಳ ಬಗ್ಗೆ ಹೆಚ್ಚಾಗಿ ತಪ್ಪು ಮಾಹಿತಿ ನೀಡುತ್ತಿತ್ತು. ಕೆಲವು ಭಾರೀ ರಾಜಕೀಯ ವಿಷಯಗಳ ಬಗ್ಗೆ ಸುಳ್ಳು ಮಾಹಿತಿ ನೀಡಲಾಗುತ್ತಿತ್ತು. ಹೀಗಾಗು ಇಂತಹ ಯುಟ್ಯೂಬ್ ಚಾನೆಲ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದೆ.
ಗೂಗಲ್ ನಿಯಮ ಉಲ್ಲಂಘಿಸಿ, ಕಂಟೆಟ್ ಫಿಲ್ಟರ್ ಮಾಡಲಾಗುತ್ತಿತ್ತು.ಅನಾವಶ್ಯಕ ವಿಚಾರಗಳನ್ನು ಈ ಯೂಟ್ಯೂಬ್ ಚಾನೆಲ್ ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಹೀಗಾಗಿ ಇವುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿಸಿದೆ.
- Advertisement -