Friday, March 29, 2024
spot_imgspot_img
spot_imgspot_img

ವಿಟ್ಲ: ಇಂಡಿಯಾ ಬುಕ್ ಆಫ್ ರೆಕಾರ್ಡ್‌‌ನಲ್ಲಿ ಚುಕ್ಕಿ ವಿಟ್ಲ ಹೆಸರು..!

- Advertisement -G L Acharya panikkar
- Advertisement -
vtv vitla
vtv vitla

ಅಬ್ಬಾ ಅದೆಷ್ಟು ಪ್ರತಿಭೆಗಳಿಗೆ ಒಡತಿ ಈ ಒಂಭತ್ತರ ಹರೆಯದ ಪುಟ್ಟ ಪೋರಿ. ಈಕೆಯ ಪ್ರತಿಭೆಗಳಿಗೆ ಒಲಿದು ಬಂದ ಪ್ರಶಸ್ತಿ ಪುರಸ್ಕಾರಗಳು ಅದೆಷ್ಟೋ. ಬಾನಲ್ಲಿ ಮಿಂಚೋ ಚುಕ್ಕಿಯ ನಡುವಲ್ಲಿ ಮಿಂಚೋ ಧ್ರುವತಾರೆ ಈ ನಮ್ಮ ಚುಕ್ಕಿ. ತನ್ನ ಅದ್ಭುತ ಪ್ರತಿಭೆಗಳ ಮೂಲಕ ಇಂಡಿಯಾ ಬುಕ್ ಆಪ್ ರೆಕಾರ್ಡ್ 2022 ರಲ್ಲಿ ತನ್ನ ಹೆಸರನ್ನು ಅಚ್ಚು ಹೊತ್ತಿರುವ ಈ ಪೋರಿಯ ಸಾಧನೆಗೆ ಇಡೀ ಕರುನಾಡು ಹೆಮ್ಮೆ ಪಡುತ್ತಿದೆ.

ಬಾಲ್ಯದಲ್ಲೇ ತನ್ನಲ್ಲಿ ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾಳೆ ಕಲಾಮಾತೆಯ ಪುಟ್ಟ ಆರಾಧಕಿ. ‘ಚುಕ್ಕಿ’ ಎಂಬ ಹೆಸರಿನಲ್ಲೇ ಪ್ರಖ್ಯಾತಿ ಪಡೆದಿರುವ 9ರ ಪೋರಿ ಚುಕ್ಕಿ, ತನ್ನ ಎಳೇವಯಸ್ಸಿನಲ್ಲೇ , ಚಿತ್ರಕಲೆ ‘ ನಟನೆ, ನಾಟ್ಯ,ಯೋಗ, ಚೆಂಡೆ, ಯಕ್ಷಗಾನ, ಪಿಲಿನಲಿಕೆ, ಫ್ಯಾಷನ್ ಶೋಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿರುವುದರ ಜೊತೆಯಲ್ಲಿ ರಾಜ್ಯ ಮಟ್ಟದ ಚೆಸ್ ನಲ್ಲಿ ಭಾಗವಹಿಸಿದ ಹೆಗ್ಗಳಿಕೆ ಈಕೆಯದ್ದು.

ಈಗಾಗಲೇ ಹಲವು ಚಲನಚಿತ್ರಗಳಲ್ಲೂ ನಟಿಸಿರುವ ಚುಕ್ಕಿ, ‘ಮಳೆನೀರ ಕೊಯ್ಲು’ ಎಂಬ ಸಾಕ್ಷ್ಯಚಿತ್ರದಲ್ಲಿ ಮುಖ್ಯಪಾತ್ರಧಾರಿಯಾಗಿ ನಟಿಸಿ ತನ್ನ ಅಮೋಘವಾದ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾಳೆ. ಅದಷ್ಟೇ ಅಲ್ಲದೆ, ಹಲವಾರು ಜಾಹೀರಾತುಗಳಲ್ಲಿಯೂ ಅಭಿನಯಿಸಿರುವ ಈ ಪುಟ್ಟಬಾಲೆ ‘ಹಳ್ಳಿಮನೆ ಹೊರನಾಡು ಪ್ರಾಡಕ್ಟ್ಸ್’ ನ ರಾಯಭಾರಿ ಆಯ್ಕೆಯಾಗುವುದರ ಮೂಲಕ ಹಳ್ಳಿಯ ಉತ್ಪನ್ನಗಳ ಮೌಲ್ಯವನ್ನು ಪಸರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾಳೆ ಈ ಪುಟ್ಟ ಬಾಲೆ.

ಪ್ರಿನ್ಸೆಸ್ ಆಫ್ ಕರ್ನಾಟಕ 2022 ರ ಮಹಾರಾಣಿ ಪಟ್ಟವನ್ನು ಮುಡಿಗೇರಿಸಿಕೊಳ್ಳುವುದರ ಮೂಲಕ ಭವಿಷ್ಯದಲ್ಲಿ ವಿಶ್ವ ಸುಂದರಿ ಪಟ್ಟಕ್ಕೆ ಭರವಸೆಯ ಬೆಳಕು ಆಗಿದ್ದಾಳೆ ಈ ನಮ್ಮ ವಿಟ್ಲದ ಪುಟ್ಟ ಸುಂದರಿ.

ದಿವಾಕರ್ ಹಾಗೂ ವಿದ್ಯಾ ದಂಪತಿಗಳ ಪುತ್ರಿಯಾದ ಈಕೆ ಪ್ರಸ್ತುತ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ತನ್ನ ಅದ್ಭುತ ಪ್ರತಿಭೆಗಳ ಮೂಲಕ ಮಿಂಚಿ ಮತ್ತಷ್ಟು ಪ್ರಶಸ್ತಿಗಳು ಮುಡಿಗೇರಲಿ ಅನ್ನೋದೇ ನಮ್ಮೆಲ್ಲರ ಹಾರೈಕೆ.

- Advertisement -

Related news

error: Content is protected !!