Saturday, April 20, 2024
spot_imgspot_img
spot_imgspot_img

ಯೋಗಿ ಆದಿತ್ಯನಾಥ್‌ ಟ್ವಿಟರ್ ಖಾತೆ ಹ್ಯಾಕ್.! ಸಿಎಂ ಕಚೇರಿ ಖಾತೆಗೆ ವಾನರನ ಪ್ರೊಫೈಲ್ ಫೊಟೋ.!

- Advertisement -G L Acharya panikkar
- Advertisement -

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕಚೇರಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಶನಿವಾರ ನಸುಕಿನ ಜಾವ ಖಾತೆಯನ್ನು ಹ್ಯಾಕ್ ಮಾಡಲಾಗಿದ್ದು, ಬಳಿಕ ಕೆಲವೇ ಗಂಟೆಗಳಲ್ಲಿ ಮತ್ತೆ ಖಾತೆಯನ್ನು ಮರು ಸ್ಥಾಪಿಸಲಾಗಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಟ್ವಿಟರ್​ ಖಾತೆ ಹ್ಯಾಕ್​;  ಹ್ಯಾಕರ್ಸ್​​ಗಳಿಂದ 100ಕ್ಕೂ ಹೆಚ್ಚು ಟ್ವೀಟ್​ಗಳು ! | Twitter Account Of Uttar  Pradesh Chief Minister Yogi ...

ಹೌ ಟೂ ಟರ್ನ್ ಯುವರ್ BAYC/MAYC ಅನಿಮೇಟೆಡ್ ಆನ್ ಟ್ವೀಟರ್ ಎಂಬ ಟ್ಯುಟೋರಿಯಲ್ ಪೋಸ್ಟ್ ಯುಪಿ ಸಿಎಂಒ ಖಾತೆಯಿಂದ ಟ್ವೀಟ್ ಆಗಿದ್ದು ಈ ಸಂದರ್ಭ ಖಾತೆ ಹ್ಯಾಕ್ ಆಗಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಜೊತೆಗೆ ಹ್ಯಾಕರ್‌ಗಳು ಖಾತೆಯ ಪ್ರೊಫೈಲ್ ಚಿತ್ರವನ್ನು ಕೂಡ ಬದಲಾಯಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಟ್ವಿಟರ್​ ಖಾತೆ ಹ್ಯಾಕ್​;  ಹ್ಯಾಕರ್ಸ್​​ಗಳಿಂದ 100ಕ್ಕೂ ಹೆಚ್ಚು ಟ್ವೀಟ್​ಗಳು ! | Twitter Account Of Uttar  Pradesh Chief Minister Yogi ...

ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್​ನ್ನು ಹ್ಯಾಕ್​ ಮಾಡಿದವರು ಆ ಖಾತೆಯಿಂದ 100ಕ್ಕೂ ಅಧಿಕ ಟ್ವೀಟ್ ಮಾಡಿದ್ದರು. BAYC/MAYC ಮೊಬೈಲ್​ ಗೇಮ್​ಗೆ ಸಂಬಂಧಿಸಿದ ಟ್ವೀಟ್​​ಗಳನ್ನು ಹಾಕಿದ್ದರು. ಪ್ರೊಫೈಲ್​ ಫೋಟೋವೂ ಕೂಡ ಈ ಗೇಮ್​ನಲ್ಲಿ ಬರುವ ವಾನರನದ್ದೇ ಹಾಕಲಾಗಿತ್ತು.

ಹ್ಯಾಕ್ ಆಗಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿಯ ಟ್ವೀಟರ್‌ ಖಾತೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಟ್ವೀಟರ್ ಖಾತೆಯನ್ನು ಮತ್ತೆ ಸುಸ್ಥಿತಿಗೆ ತರಲಾಗಿದ್ದು, ಹ್ಯಾಕರ್‌ಗಳು ಪೋಸ್ಟ್ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ಅಳಿಸಲಾಗಿದೆ.

- Advertisement -

Related news

error: Content is protected !!