Sunday, May 19, 2024
spot_imgspot_img
spot_imgspot_img

ಕುಂದಾಪುರ: ಕೋವಿಡ್ ನಿಯಮ ಉಲ್ಲಂಘಿಸಿ ಓಣಂ ಹಬ್ಬ ಆಚರಿಸಿದ ವಿದ್ಯಾರ್ಥಿಗಳು; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

- Advertisement -G L Acharya panikkar
- Advertisement -

ಕುಂದಾಪುರ: ಕೊರೋನಾ ನಿಯಂತ್ರಣಕ್ಕೆ ಪ್ರತಿ ಜಿಲ್ಲೆಗಳಲ್ಲೂ ಹರ ಸಾಹಸ ನಡೆಸಲಾಗುತ್ತಿದೆ. ಈ ನಡುವೆ ಜಿಲ್ಲೆಗಳಲ್ಲಿ ಕೆಲವು ನಿರ್ಬಂಧಗಳನ್ನು ಮುಂದುವರೆಸಲಾಗಿದೆ. ಈ ನಡುವೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕಾಲೇಜೊಂದರಲ್ಲಿ ಓಣಂ ಹಬ್ಬದ ಆಚರಣೆಯ ಹೆಸರಲ್ಲಿ ನಿಯಮ ಉಲ್ಲಂಗನೆಯಾಗಿರುವ ಆರೋಪ ವ್ಯಕ್ತವಾಗಿದೆ.

ಕೋಟ ಸಮೀಪದ ಇಸಿಆರ್ ಕಾಲೇಜಿನಲ್ಲಿ ಭರ್ಜರಿ ಓಣಂ ಆಚರಣೆ ನಡೆಸಲಾಗಿದ್ದು, ವಿದ್ಯಾರ್ಥಿಗಳು ಮೋಜು ಮಸ್ತಿ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಂದ ಕಾನೂನು ಗಾಳಿಗೆ ತೂರಿ ಓಣಂ ಆಚರಿಸಲಾಗಿದೆ ಎನ್ನುವ ಆರೋಪ ವ್ಯಕ್ತವಾಗಿದೆ.

ಬಹುತೇಕ ಕೇರಳ ಮೂಲದ ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಯಾವುದೇ ಕೊರೋನಾ ನಿಯಮ ಪಾಲನೆಯಾಗಿಲ್ಲ ಎನ್ನಲಾಗಿದೆ. ಕೇರಳದಿಂದ ಬರುವವರಿಗೆ ಜಿಲ್ಲೆಯಲ್ಲಿ ಕಡ್ಡಾಯ ಕ್ವಾರಂಟೈನ್ ಇದ್ದರೂ ಮೋಜು ಮಸ್ತಿ ನಡೆಸಲಾಗಿದೆ.

ಸದ್ಯ ಕಾಲೇಜಿನ ಮೋಜು ಮಸ್ತಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಬಂಧಿಸಿದವರು ಪ್ರಕರಣದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕಾಗಿದೆ.

- Advertisement -

Related news

error: Content is protected !!