



ಜಗತ್ತಿನಲ್ಲಿ ಎಲ್ಲಾ ರಾಷ್ಟçಗಳು ಭಿನ್ನ ಆದರೆ ನಮ್ಮ ಭಾರತ ಅದಕ್ಕಿಂತಲೂ ಭಿನ್ನ ಯಾಕೆಂದರೆ ಎಲ್ಲಾ ರಾಷ್ಟ್ರಗಳು ಎಲ್ಲಾ ವಿಷಯಗಳಲ್ಲಿ ಮುಂಚೂಣಿಯಲ್ಲಿದ್ದರು, ಭಾರತ ಪ್ರಾಚೀನ ಕಾಲದಿಂದಲೂ ಬಹಳ ವಿದ್ಯಮಾನವಾಗಿ ಮುಂಚೂಣಿಯಲ್ಲಿದೆ. ವ್ಯಾಪಾರ-ವ್ಯವಹಾರ, ವೈದ್ಯಕೀಯ, ತಾಂತ್ರಿಕ, ಶಿಕ್ಷಣ, ಹೀಗೆ ಹತ್ತು ಹಲವಾರು ವಿಷಯಗಳನ್ನು ಒಳಗೊಂಡು ಜಗತ್ತಿನಲ್ಲಿ ಸಂಪದ್ಭರಿತ ದೇಶವಾಗಿ ಮುಂದುವರೆಯುತ್ತಿದೆ. ಹೀಗೆ ಸಾಗುವಲ್ಲಿ ಹಲವಾರು ಸತ್ಯಾ – ಮಿಥ್ಯತೆಗಳನ್ನು ಕೂಡ ಕಾಣಬಹುದು.

ಮುಂದಿನ ಯುವ ಪೀಳಿಗೆ ಈ ವಿಷಯಗಳನ್ನು ಅರಿತಲ್ಲಿ ಮುಂದಿನ ಕಾರ್ಪೊರೇಟ್ ಜಗತ್ತಿನಲ್ಲಿ ನಮ್ಮ ಭಾರತ ಪ್ರಥಮ ಸ್ಥಾನದಲ್ಲಿರುತ್ತದೆ.ಈ ಸಲುವಾಗಿ ಶ್ರೀರಾಮ ಪ್ರಥಮದರ್ಜೆ ಮಹಾ ವಿದ್ಯಾಲಯ ಕಲ್ಲಡ್ಕ ರಾಷ್ಟ್ರೀಯ ವಿಚಾರ ಸಂಕಿರಣ ಎಂಬ ವಿಷಯದ ಕುರಿತು ದಿನಾಂಕ 25 ಫೆಬ್ರವರಿ 2025ನೇ ಮಂಗಳವಾರ ಸಮಯ 10:00 ಗಂಟೆಗೆ ಸರಿಯಾಗಿ ಶ್ರೀರಾಮ ಪದವಿ ಕಾಲೇಜು ವಿದ್ಯಾಲಯದ ಆಜಾದ್ ಭವನದಲ್ಲಿ ಸಮಗ್ರ ಮಾರ್ಗದರ್ಶನ ನೀಡಲು ತಯಾರಾಗಿದೆ.ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರಚಲಿತ ಭಾರತ: ಸತ್ಯ – ಮಿಥ್ಯೆ ಎಂಬ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅಣ್ಣಾಮಲೈ ಕೆ. ನಿವೃತ್ತ IPS ಅಧಿಕಾರಿ, ತಮಿಳುನಾಡು, ಬೆಂಗಳೂರಿನ ಇತಿಹಾಸ ಸಂಶೋಧಕರಾದ ಶ್ರೀ ಡಾ| ವಿಕ್ರಮ್ ಸಂಪತ್, ಬೆಂಗಳೂರಿನ ನ್ಯಾವಾದಿಗಳಾದ ಶ್ರೀಮತಿ ಕ್ಷಮಾ ನರಗುಂದ ಮತ್ತು ಸಾಮಾಜಿಕ ಕಾರ್ಯಕರ್ತರಾದ ಶ್ರೀ ಶ್ರೀಕಾಂತ ಶೆಟ್ಟಿ ಕಾರ್ಕಳ ಇವರುಗಳ ಮಾರ್ಗದರ್ಶನ ಹಾಗೂ ಪ್ರತಿ ಅವಧಿಯ ಕೊನೆಯಲ್ಲಿ ಪ್ರಶ್ನೋತ್ತರ ಅವಕಾಶವಿದ್ದು ವಿಚಾರ ಸಂವಾದ ಕಾರ್ಯಕ್ರಮ ಜರುಗಲಿದೆ.ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಭಾಗವಹಿಸಲು ಮುಕ್ತ ಅವಕಾಶವಿದೆ. ತಮ್ಮ ಭಾಗವಹಿಸುವಿಕೆಯನ್ನು ಮುಂಚಿತವಾಗಿ ಮಂಡಳಿಗೆ ತಿಳಿಸಬೇಕಾಗಿದೆ.