Friday, July 24, 2026
spot_imgspot_img
spot_imgspot_img

60 ಕೋಟಿ ವಂಚನೆ ಪ್ರಕರಣ; ರಾಜ್‌ ಕುಂದ್ರಾ ಕಂಪನಿಯ ನಾಲ್ವರು ನೌಕರರಿಗೆ ಸಮನ್ಸ್‌

- Advertisement -
- Advertisement -

ಮುಂಬೈ: ನಟಿ ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ ದಂಪತಿ ಎದುರಿಸುತ್ತಿರುವ 60 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದ್ರಾ ಒಡೆತನದ ಬೆಸ್ಟ್ ಡೀಲ್ ಪ್ರೈವೇಟ್ ಲಿಮಿಟೆಡ್‌ನ ನಾಲ್ವರು ಉದ್ಯೋಗಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ಸಮನ್ಸ್ ಜಾರಿ ಮಾಡಿದೆ.

ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ ಉದ್ಯಮಿ ದೀಪಕ್ ಕೊಠಾರಿಯವರಿಗೆ 60 ಕೋಟಿ ರೂ. ವಂಚನೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಸಾಲ ಮತ್ತು ಹೂಡಿಕೆ ಒಪ್ಪಂದದಲ್ಲಿ ಈ ವಂಚನೆ ನಡೆದಿದೆ. ಈ ಪ್ರಕರಣ ನಡೆಯುವಾಗ ಈ ನಾಲ್ವರು ನೌಕರರು ರಾಜ್ ಕುಂದ್ರಾ ಅವರ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದರು.

ನಾಲ್ವರು ಉದ್ಯೋಗಿಗಳಲ್ಲಿ ಒಬ್ಬರು ಕಳೆದ ವಾರ ಇಒಡಬ್ಲ್ಯೂನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ. ಅಗತ್ಯವಿದ್ದರೆ ಮತ್ತೊಮ್ಮೆ ಅವರನ್ನು ವಿಚಾರಣೆಗೆ ಕರೆಯಬಹುದು. ಮುಂದಿನ ದಿನಗಳಲ್ಲಿ ಇತರ ಮೂವರು ಉದ್ಯೋಗಿಗಳ ಹೇಳಿಕೆಗಳನ್ನು ದಾಖಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

- Advertisement -

Related news

error: Content is protected !!