Saturday, July 5, 2025
spot_imgspot_img
spot_imgspot_img

ನೇಪಾಳದಲ್ಲಿ ನಡೆದ ಇಂಡೋ – ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಠಲ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ವಿಠಲ ಎಜುಕೇಶನ್ ಸೊಸೈಟಿ ವತಿಯಿಂದ ಅಭಿನಂದನೆ

- Advertisement -
- Advertisement -

ಡಿಸೆಂಬರ್ 1-2 ರಂದು ನೇಪಾಳದಲ್ಲಿ ನಡೆದ ಇಂಡೋ – ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತ ತಂಡದಲ್ಲಿ ವಿಟ್ಲ ಪದವಿಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಭಾಗವಹಿಸಿ ಭಾರತ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಲು ಕಾರಣಕರ್ತರಾಗಿರುತ್ತಾರೆ.

ಈ ತಂಡದ ಸಂಪೂರ್ಣ ಯಶಸ್ಸಿಗೆ ವಿಟ್ಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ, ತರಬೇತುದಾರ, ರಾಷ್ಟ್ರೀಯ ಹ್ಯಾಂಡ್ ಬಾಲ್ ಆಟಗಾರ ಶ್ರೀನಿವಾಸ ಗೌಡ ಕಾರಣರಾಗಿರುತ್ತಾರೆ.

ಆಕಾಶ್, ಜಸ್ವಂತ, ಮೋಕ್ಷಿತ್, ಸುಬ್ರಹ್ಮಣ್ಯ, ಧ್ಯಾನ್, ಮೊಹಮ್ಮದ್ ಮುಸ್ತಾಕ್, ಮೊಹಮ್ಮದ್ ರಾಝಿ, ಮನೀಶ್, ಕೀರ್ತೇಶ್, ಉತ್ತಮ್, ಶ್ರವಣ್ ರೈ, ಕಿಶನ್. ಈ ಅಭೂತಪೂರ್ವ ಸಾಧನೆಯನ್ನು ವಿಠಲ ಎಜುಕೇಶನ್ ಸೊಸೈಟಿಯ ಅಧ್ಯಕ್ಷರು, ಪದಾಧಿಕಾರಿಗಳು, ಆಡಳಿತಾಧಿಕಾರಿ, ಪ್ರಾಂಶುಪಾಲರುಗಳು, ನೌಕರ ವೃಂದ ಹಾಗೂ ಎಲ್ಲಾ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.

- Advertisement -

Related news

error: Content is protected !!