Friday, March 29, 2024
spot_imgspot_img
spot_imgspot_img

ಪುರಸಭಾ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮುತ್ತಪ್ಪ ರೈ ಆಪ್ತ, ಡೋಲ್ಫಿ ರೇಗೋ ಹೃದಯಾಘಾತದಿಂದ ನಿಧನ

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರು ಪುರಸಭೆಯ ಮಾಜಿ ಸದಸ್ಯ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಇಲ್ಲಿನ ಪಾಂಗ್ಲಾಯಿ ನಿವಾಸಿ ದಿ.ಅಲೆಕ್ಸ್ ರೇಗೋ ಹಾಗೂ ದಿ.ಪಾವ್ಲಿನ್ ರೇಗೋರವರ ಪುತ್ರ ಡೋಲ್ಫಿ ಎ.ರೇಗೋ(63ವ.)ರವರು ಹೃದಯಾಘಾತದಿಂದ ನ.6 ರಂದು ದರ್ಬೆ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ನಿಧನರಾದರು.


ಮೃತ ಡೋಲ್ಫಿ ರೇಗೋರವರು ಸಂಜೆ ಪಾಂಗ್ಲಾಯಿಯ ತನ್ನ ಮನೆಯಲ್ಲಿದ್ದ ಸಂದರ್ಭ ಹಠಾತ್ತನೆ ಎದೆ ನೋವು ಕಾಣಿಸಿದ್ದು, ಕೂಡಲೇ ಅವರನ್ನು ದರ್ಬೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಮೃತ ಡೋಲ್ಫಿ ರೇಗೋರವರು ಪಾಂಗ್ಲಾಯಿಗೆ ತೆರಳುವ ಮೊದಲು ದರ್ಬೆ ರೇಗೋ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯ ಹೊಂದಿದ್ದರು. ಡೋಲ್ಫಿ ರೇಗೋರವರು ಪುತ್ತೂರು ಪುರಸಭೆಯಲ್ಲಿ ಎರಡು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಪುತ್ತೂರು ಯೂತ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾಗಿ, ನಗರ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ, ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಪಾಲನಾ ಸಮಿತಿಯಲ್ಲಿ ಎರಡು ಅವಧಿಗೆ ಉಪಾಧ್ಯಕ್ಷರಾಗಿ, ಡೋನ್ ಬೋಸ್ಕೊ ಕ್ಲಬ್ ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಡೋಲ್ಫಿ ರೇಗೋರವರು ಓರ್ವ ಉತ್ತಮ ಲೆದರ್ ಬಾಲ್ ಕ್ರಿಕೆಟ್ ಆಟಗಾರರಾಗಿದ್ದು ಪುತ್ತೂರು ಕೋಲ್ಟ್ಸ್ ಕ್ಲಬ್ ನಲ್ಲಿ ಕಪ್ತಾನರಾಗಿಯೂ, ರಾಜ್ಯ ವಾಲಿಬಾಲ್ ತಂಡದ ಸದಸ್ಯರಾಗಿಯೂ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕ್ರಿಕೆಟ್ ಆಟಗಾರನಾಗಿಯೂ ಡೋಲ್ಫಿ ರೇಗೋರವರು ಗುರುತಿಸಿಕೊಂಡಿದ್ದರು.

ಮೃತರು ಪತ್ನಿ ಲೀನಾ ರೆಬೆಲ್ಲೊ, ಪುತ್ರಿ ಜಾಕ್ಲಿನ್ ಕ್ರಿಸ್ಟಲ್, ಪುತ್ರ ಡ್ಯಾಲನ್, ಸಹೋದರ ಹೆಕ್ಟರ್ ರೇಗೋ ಸೂರತ್, ಸಹೋದರಿ ಹೆರಿಯಟ್ ಬಾಂಬೆ, ಐವಿ ಬಾಂಬೆರವರನ್ನು ಅಗಲಿದ್ದಾರೆ.

ಮೃತದೇಹ ಆಸ್ಪತ್ರೆಯಲ್ಲಿದ್ದ ಸಂದರ್ಭ ಮಾಯಿದೆ ದೇವುಸ್ ಚರ್ಚ್ ನ ಪ್ರಧಾನ ಧರ್ಮಗುರು ವಂ/ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ/ಲ್ಯಾರಿ ಪಿಂಟೋ, ಪಾಲನಾ ಸಮಿತಿಯ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಮಾಜಿ ಉಪಾಧ್ಯಕ್ಷ ಜೆ.ಪಿ ರೊಡ್ರಿಗಸ್, ಜ್ಯೋ ಡಿ’ಸೋಜ, ಜೋನ್ ಕುಟಿನ್ಹಾ, ಕಾರ್ಯದರ್ಶಿ ಫೆಬಿಯನ್ ಗೋವಿಯಸ್, ಆರ್ಥಿಕ ಸಮಿತಿಯ ಸದಸ್ಯರಾದ ವಿ.ಜೆ ಫೆರ್ನಾಂಡೀಸ್, ವಿನ್ಸೆಂಟ್ ತಾವ್ರೋ, ನಗರಸಭಾ ಮಾಜಿ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್, ಪುತ್ತೂರು ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್ಷದ್ ದರ್ಬೆ, ರೋಟರಿ ಜಿಲ್ಲಾ ಕಾರ್ಯದರ್ಶಿ ಆಸ್ಕರ್ ಆನಂದ್, ಕ್ರಿಸ್ಟೋಫರ್ ಎಸೋಸಿಯೇಶನ್ ಅಧ್ಯಕ್ಷ ರೋಶನ್ ಡಾಯಸ್ ಹಾಗೂ ಸದಸ್ಯರು, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ಮಾರ್ಟಿನ್ ಡಿ’ಸೋಜ ಹಾಗೂ ಸದಸ್ಯರು, ಡೊನ್ ಬೋಸ್ಕೊ ಕ್ಲಬ್ ಅಧ್ಯಕ್ಷ ಅರುಣ್ ರೆಬೆಲ್ಲೋ ಹಾಗೂ ಸದಸ್ಯರು, ಧರ್ಮಭಗಿನಿಯರು ಸಹಿತ ಹಲವರು ಆಗಮಿಸಿ ಸಾಂತ್ವನ ನುಡಿದಿದ್ದಾರೆ.

- Advertisement -

Related news

error: Content is protected !!