



ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಹರ್ಯಾಣದಲ್ಲಿ ಆಡಳಿತಾರೂಢ ಬಿಜೆಪಿ ಹ್ಯಾಟ್ರಿಕ್ ಗೆಲುವಿನ ಮೇಲೆ ನಿರೀಕ್ಷೆ ಇಟ್ಟಿದೆ. ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಅ. 8 ರಂದು ಮತ ಎಣಿಕೆ ನಡೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನೇತೃತ್ವದ ಮೈತ್ರಿಕೂಟ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ.
ಇಲ್ಲಿದೆ ಎಕ್ಸಿಟ್ ಪೋಲ್‌ನ ಸಂಪೂರ್ಣ ಮಾಹಿತಿ.
ಸಿ ವೋಟರ್ -ಆಜ್ ತಕ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ + ಎನ್‌ಸಿ – 11-15, ಬಿಜೆಪಿ – 27-31, ಪಿಡಿಪಿ – 02 , ಇತರೆ – 01. ದೈನಿಕ್ ಬಾಸ್ಕರ್ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ + ಎನ್‌ಸಿ – 35-40, ಬಿಜೆಪಿ – 20-25, ಪಿಡಿಪಿ – 4-7, ಇತರೆ – 12-16
ಪೀಪಲ್ ಪ್ಲಸ್ ಸಮೀಕ್ಷೆ ಪ್ರಕಾರ ಕಾಂಗ್ರೆಸ್ – ಎನ್‌ಸಿ – 40-48, ಬಿಜೆಪಿ – 27-32, ಪಿಡಿಪಿ – 7-11, ಇತರೆ – 4-6. ಇಂಡಿಯಾ ಟುಡೆ- ಸಿ ವೋಟರ್ ಕಾಂಗ್ರೆಸ್ + ಎನ್‌ಸಿ – 40-48, ಬಿಜೆಪಿ – 27-32, ಪಿಡಿಪಿ – 6-12, ಇತರೆ – 6-11