Saturday, June 28, 2025
spot_imgspot_img
spot_imgspot_img

ಪ್ರಿಯಕರನ ಕೋರಿಕೆಯಂತೆ ಮದ್ಯ ಸೇವನೆ; ಅನುಮಾನಾಸ್ಪದವಾಗಿ ಯುವತಿ ಸಾವು..!

- Advertisement -
- Advertisement -

ಪ್ರಿಯಕರನ ಕೋರಿಕೆಯಂತೆ ಮದ್ಯ ಸೇವನೆ ಮಾಡಿದ ಯುವತಿಯು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ.

ಮೃತಪಟ್ಟ ಯುವತಿ ರಿತಿ ಏಂಜೆಲ್ (19) ಹಾಗೂ ಯುವಕ ನೀಲಗಿರಿ ಜಿಲ್ಲೆಯ ಊಟಿಯ ಬಾಂಬೆ ಕ್ಯಾಸಲ್ ನ ಆಕಾಶ್‌(20) ಎಂದು ಗುರುತಿಸಲಾಗಿದೆ.

ಆಕಾಶ್‌ ಹಾಗೂ ರಿತಿ ಏಂಜೆಲ್ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಹತ್ತನೇ ತರಗತಿಯಲ್ಲಿ ಒಟ್ಟಿಗೆ ಓದಿದ್ದರು. ರಿತಿ ಏಂಜೆಲ್ ಕೊಯಮತ್ತೂರಿನ ಖಾಸಗಿ ನರ್ಸಿಂಗ್ ಕಾಲೇಜಿಗೆ ಮತ್ತು ಆಕಾಶ್ ನೀಲಗಿರಿಯ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಿಕೊಂಡಿದ್ದರು.ಇಬ್ಬರು ಕಾಲಕಾಲಕ್ಕೆ ಭೇಟಿಯಾಗುತ್ತಿದ್ದರು. ಹೀಗಿರುವಾಗ ಕಳೆದ ಶನಿವಾರ ಗೆಳೆಯನ ಕೋರಿಕೆಯಂತೆ ಕೊಯಮತ್ತೂರಿನಿಂದ ರಿತಿ ಏಂಜೆಲ್ ಬಂದಿದ್ದಳು.

ಟಾಸ್ಮಾಕ್ ಬಾರ್ ನಲ್ಲಿ ಮದ್ಯ ಖರೀದಿಸಿದ ಆಕಾಶ್ ತನ್ನ ಮನೆಗೆ ರಿತಿಯನ್ನು ಕರೆದುಕೊಂಡು ಹೋಗಿದ್ದ. ಆನ್‌ಲೈನ್‌ನಲ್ಲಿ ಊಟ ಆರ್ಡರ್ ಮಾಡಿ, ಮದ್ಯ ಸೇವಿಸಿದ್ದಾರೆ. ಬಳಿಕ ಬೈಕ್‌ನಲ್ಲಿ ಸಮೀಪದ ಪೈನ್ ಅರಣ್ಯ ಪ್ರದೇಶಕ್ಕೆ ತೆರಳಿ ಮ್ಯಾಜಿಕ್ ಮಶ್ರೂಮ್ ಗಳನ್ನು ತಂದು ವೈನ್ ಸಮೇತ ತಿಂದಿದ್ದಾರೆ. ಇದರಿಂದ ಇಬ್ಬರೂ ನಶೆಗೊಳಗಾಗಿ, ನಿದ್ದೆಗೆ ಜಾರಿದ್ದಾರೆ. ಆದರೆ ಬೆಳಗ್ಗೆ ಆಕಾಶ್‌ ಎದ್ದು ರಿತಿಯನ್ನು ಎಬ್ಬಿಸಲು ಹೋದಾಗ ಆಕೆ ಎಚ್ಚರಗೊಳ್ಳದಿರುವುದು ಆತಂಕ ಮೂಡಿಸಿದೆ. ಗಾಬರಿಗೊಂಡ ಆಕಾಶ್‌ ಆಂಬ್ಯುಲೆನ್ಸ್‌ಗೆ ಕಾಲ್ ಮಾಡಿದ್ದಾನೆ. ನಂತರ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ಬಳಿಕ ರಿತಿ ಸಾವನ್ನಪ್ಪಿರುವ ವಿಷಯ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಊಟಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕಾಶ್‌ನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

- Advertisement -

Related news

error: Content is protected !!