


ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ಹಾಗೂ ‘ಎಂಆರ್ಟಿ ಮ್ಯೂಸಿಕ್’ ಕಂಪನಿ ನಡುವಿನ ಕಾನೂನು ಜಟಾಪಟಿ ಮುಂದುವರಿದಿದೆ. ರಕ್ಷಿತ್ ಶೆಟ್ಟಿ ಅವರು ‘ಪರಂವಾ ಸ್ಟುಡಿಯೋಸ್’ ಮೂಲಕ ನಿರ್ಮಾಣ ಮಾಡಿದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ‘ಎಂಆರ್ಟಿ ಮ್ಯೂಸಿಕ್’ ಸಂಸ್ಥೆಗೆ ಸೇರಿದ ಎರಡು ಹಾಡುಗಳನ್ನು ಅನುಮತಿ ಇಲ್ಲದೇ ಬಳಕೆ ಮಾಡಿಕೊಂಡಿದ್ದಕ್ಕೆ ಕೇಸ್ ಹಾಕಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ಕೋರ್ಟ್ನಲ್ಲಿ 20 ಲಕ್ಷ ರೂಪಾಯಿ ಠೇವಣಿ ಇಡುವಂತೆ ರಕ್ಷಿತ್ ಶೆಟ್ಟಿ ಹಾಗೂ ‘ಪರಂವಾ ಸ್ಟುಡಿಯೋಸ್’ ಸಂಸ್ಥೆಗೆ ಸೂಚಿಸಲಾಗಿದೆ.
‘ಬ್ಯಾಚುಲರ್ ಪಾರ್ಟಿ’ ಕನ್ನಡ ಸಿನಿಮಾ ಈ ವರ್ಷ ಜನವರಿಯಲ್ಲಿ ರಿಲೀಸ್ ಆಗಿತ್ತು. ಆ ಸಿನಿಮಾದಲ್ಲಿ ‘ನ್ಯಾಯ ಎಲ್ಲಿದೆ..’ ಹಾಗೂ ‘ಒಮ್ಮೆ ನಿನ್ನನ್ನು..’ ಹಾಡುಗಳನ್ನು ಬಳಕೆ ಮಾಡಿಕೊಂಡಿದ್ದಕ್ಕೆ MRT ಮ್ಯೂಸಿಕ್ ಸಂಸ್ಥೆಯ ನವೀನ್ ಕುಮಾರ್ ದೂರು ನೀಡಿದ್ದರು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿತ್ತು. ಕಾಪಿ ರೈಟ್ಸ್ ಆ್ಯಕ್ಸ್ ಸೆ. 63 ರಡಿ ಅನುಮತಿ ಇಲ್ಲದೇ ಹಾಡು ಬಳಕೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು. ನಟ ರಕ್ಷಿತ್ ಠಾಣೆಗೆ ವಿಚಾರಣೆಗೆ ಕೂಡ ಹಾಜರಾಗಿದ್ದರು.