- Advertisement -
- Advertisement -
ನವದೆಹಲಿ: ಕೊರೊನಾ ಸೋಂಕು ಎಂಬ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ. ದೇಶದೆಲ್ಲೆಡೆ ಹಬ್ಬುತ್ತಿರುವ ಈ ಹೆಮ್ಮಾರಿ ಬೆಂಗಾಲಿ ಮೂಲದ ನಟಿ ಕೊಯೆಲ್ ಮಲ್ಲಿಕ್ ಅವರನ್ನು ವಕ್ಕರಿಸಿಕೊಂಡಿದೆ. ಕೊರೊನಾ ಸೋಂಕು ತಗುಲಿರುವ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿದ್ದಾರೆ.

ಇದರ ಜತೆಗೆ ಅವರ ಕುಟುಂಬಸ್ಥರಿಗೂ ಸೋಂಕು ತಗುಲಿದೆ. ಬೆಂಗಾಲಿ ಮೂಲದ ನಟಿ ಕೊಯೆಲ್ ಮಲ್ಲಿಕ್ ಮತ್ತು ಪತಿ ಸಿಸ್ಪಾಲ್ ಸಿಂಗ್, ತಂದೆ ರಂಜಿತ್, ತಾಯಿ ದೀಪಾ ಮಲ್ಲಿಕ್ ಗೂ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಕುಟುಂಬ ಸೆಲ್ಫ್ ಕ್ವಾರಂಟೈನ್ ನಲ್ಲಿದೆ.

ಮತ್ತೊಂದು ವಿಷಯವೇನೆಂದರೆ ಮೇ ತಿಂಗಳಲ್ಲಿ ಈ ನಟಿ ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಕೊರೊನಾ ಸೋಂಕು ನಡುವೆಯೂ ಮಗುವನ್ನು ಆರೈಕೆ ಮಾಡುತ್ತಿದ್ದಾರ ಎಂಬುದರ ಬಗ್ಗೆ ಲಭ್ಯವಾಗಿಲ್ಲ. ಇನ್ನು ನಟಿ ಮಾಡಿದ ಟ್ವೀಟ್ ಗೆ ಅನೇಕ ಮಂದಿ ಅಭಿಮಾನಿಗಳು ರಿಟ್ವೀಟ್ ಮಾಡಿದ್ದು, ಆದಷ್ಟು ಬೇಗ ಗುಣಮುಖರಾಗಿ ಬನ್ನಿ ಎಂದು ಹಾರೈಸಿದ್ದಾರೆ.
- Advertisement -