Friday, March 29, 2024
spot_imgspot_img
spot_imgspot_img

ಕೊರೊನಾ ಭೀತಿ: ಚುನಾವಣೆ ನಡೆಸಲು ಆಯೋಗದಿಂದ ಹೊಸ ಮಾರ್ಗಸೂಚಿ ಪ್ರಕಟ

- Advertisement -G L Acharya panikkar
- Advertisement -

ನವದೆಹಲಿ: ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸಾರ್ವತ್ರಿಕ ಚುನಾವಣೆ ಮತ್ತು ಉಪಚುನಾವಣೆ ನಡೆಸಲು ಚುನಾವಣಾ ಆಯೋಗ ಹೊಸ ಮಾರ್ಗಸೂಚಿ ಹೊರಡಿಸಿದೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ನಾಮನಿರ್ದೇಶನ ಪತ್ರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಸಭೆಯ ನಂತರ ಚುನಾವಣಾ ಆಯೋಗ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿತು. ರಾಜಕೀಯ ಪಕ್ಷಗಳು ಮತ್ತು ವಿವಿಧ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳ ಅಭಿಪ್ರಾಯಗಳ ಆಧಾರದ ಮೇಲೆ ಹೊಸ ನಿಯಮಗಳನ್ನು ರೂಪಿಸಲಾಗಿದೆ.

80 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನ ವ್ಯವಸ್ಥೆ:

ಕೊರೊನಾ ಹಿನ್ನಲೆಯಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನದ ವ್ಯವಸ್ಥೆ ಮಾಡಲಾಗುವುದು. ಇದರ ಜತೆಗೆ ವಿಶೇಷ ಚೇತನ ಹಾಗೂ ಕೊರೊನಾ ಸೋಂಕಿತರಿಗೆ ಕೂಡ ಇದೇ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ಮೊದಲ ಬಾರಿಗೆ ಬಿಹಾರದಲ್ಲಿ ಹೊಸ ನಿಯಮ ಅನ್ವಯ ಸಾಧ್ಯತೆ

ಬಿಹಾರದಲ್ಲಿ ಚುನಾವಣೆ ನಡೆಯಲಿರುವ ಹಿನ್ನಲೆಯಲ್ಲಿ ಆಯೋಗವು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಬಿಹಾರದ ಚುನಾವಣಾ ವೇಳಾಪಟ್ಟಿಯನ್ನು ಸೆಪ್ಟೆಂಬರ್ 20 ರೊಳಗೆ ಘೋಷಿಸುವ ಸಾಧ್ಯತೆಯಿದೆ . ಈ ರಾಜ್ಯದಲ್ಲಿ ಅಕ್ಟೋಬರ್-ನವೆಂಬರ್ ತಿಂಗಳುಗಳಲ್ಲಿ ಮತದಾನ ನಡೆಯಲಿದೆ. ಈವರೆಗೆ ಬಿಹರಾದಲ್ಲಿ ಕೊರೊನಾಗೆ 574 ಮಂದಿ ಸಾವನ್ನಪ್ಪಿದ್ದರೆ, 1.15 ಲಕ್ಷ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ.

ಆನ್ ಲೈನ್ ಮೂಲಕ ಅಭ್ಯರ್ಥಿಗಳ ನಾಮ ನಿರ್ದೇಶನ:

ಇನ್ನು ಅಭ್ಯರ್ಥಿಗಳಿಗೆ ಆನ್ ಲೈನ್ ಮೂಲಕ ನಾಮನಿರ್ದೇಶನ ಮಾಡಲು ಮಾರ್ಗಸೂಚಿ ಹೊರಡಿಸಲಾಗಿದೆ.
ನಾಮನಿರ್ದೇಶನ ಸಮಯದಲ್ಲಿ ಅಭ್ಯರ್ಥಿಯ ಜೊತೆಯಲ್ಲಿರುವ ಜನರ ಸಂಖ್ಯೆ ಮತ್ತು ವಾಹನಗಳ ಸಂಖ್ಯೆಯ ಮಾನದಂಡಗಳನ್ನು ಆಯೋಗ ಪರಿಷ್ಕರಿಸಿದೆ. ನಾಮನಿರ್ದೇಶನ ನಮೂನೆ ಮತ್ತು ಅಫಿಡವಿಟ್ ಅನ್ನು ಆನ್ಲೈನ್ನಲ್ಲಿ ಭರ್ತಿ ಮಾಡಬೇಕು.
ಮೊದಲ ಬಾರಿಗೆ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲು ಭದ್ರತಾ ಮೊತ್ತವನ್ನು ಆನ್ಲೈನ್ನಲ್ಲಿ ಠೇವಣಿ ಇಡುವ ಆಯ್ಕೆಯನ್ನು ಹೊಂದಿರುತ್ತಾರೆ.

ಚುನಾವಣಾ ಪ್ರಚಾರಕ್ಕೂ ಗೈಡ್ ಲೈನ್ಸ್:
ಇನ್ನು ಕೊರೊನಾ ಸೋಂಕು ಹರಡುವ ನಿಟ್ಟಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ಬೆಂಬಲಿಗರು ಪ್ರಚಾರ ನಡೆಸಬೇಕು ಎಂದು ಆಯೋಗ ಸೂಚಿಸಿದೆ, ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿ ಸೇರಿದಂತೆ ವ್ಯಕ್ತಿಗಳ ಸಂಖ್ಯೆಯನ್ನು ಸೀಮಿತಗೊಳಿಸಿದೆ. ಕೇಂದ್ರ ಅಥವಾ ರಾಜ್ಯ ಹೊರಡಿಸಿದ ಸೂಚನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸಭೆ ಮತ್ತು ರೋಡ್ ಶೋಗಳಿಗೆ ಅನುಮತಿಸಲಾಗುವುದು.

ಸುರಕ್ಷತೆಯಲ್ಲಿ ಮತದಾನ:
ಫೇಸ್ ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕ್ಯಾನರ್ ಗಳು ಳು, ಫೇಸ್ ಶೀಲ್ಡ್ ಮತ್ತು ಪಿಪಿಇ ಕಿಟ್ಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಲಾಗುವುದು. ಮತದಾರರ ನೋಂದಣಿಗೆ ಸಹಿ ಮಾಡಲು ಮತ್ತು ಮತದಾನಕ್ಕಾಗಿ ಇವಿಎಂನ ಬಟನ್ ಅನ್ನು ಒತ್ತುವುದಕ್ಕಾಗಿ ಎಲ್ಲ ಮತದಾರರಿಗೆ ಹ್ಯಾಂಡ್ ಗ್ಲೌಸ್ ನೀಡಲಾಗುವುದು.

- Advertisement -

Related news

error: Content is protected !!