ಬೆಂಗಳೂರು: ಹೆಮ್ಮಾರಿ ಕೊರೊನಾ ಅಟ್ಟಹಾಸಕ್ಕೆ ಬ್ರೇಕ್ ಹಾಕುವ ಕಾಲ ಸನ್ನಿಹಿತವಾಗಿದೆ. ಇಂದಿನಿಂದ ಪ್ರತಿ ರಾಜ್ಯದ ಕನಿಷ್ಟ 3 ಕೇಂದ್ರಗಳಲ್ಲಿ ಲಸಿಕೆ ಡ್ರೈರನ್ಗಾಗಿ ರಿಹರ್ಸಲ್ ನಡೆಯಲಿದೆ.

ಕಲಬುರಗಿಯಲ್ಲಿ ಲಸಿಕೆ ಡ್ರೈರನ್ಗಾಗಿ ಆರೋಗ್ಯ ಇಲಾಖೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕೊರೊನಾ ಲಸಿಕೆಯ 1.20 ಲಕ್ಷ ಡೋಸ್ ಸಂಗ್ರಹಿಸಲಾಗಿದ್ದು, ಆರೋಗ್ಯ ಇಲಾಖೆಯ ರೇಫ್ರಿಜಿರೇಟರ್ನಲ್ಲಿ ಲಸಿಕೆ ಉಗ್ರಾಣ ಇ
ಕಲಬುರಗಿಯಲ್ಲಿ 3 ಕಡೆ ಲಸಿಕೆ ವಿತರಣೆಯ ಡ್ರೈರನ್ ನಡೆಯಲಿದೆ. ಅಶೋಕನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಕಲಬುರಗಿ ಗ್ರಾಮೀಣ ಭಾಗದ ಅವರಾದನ ಪ್ರಾಥಮಿಕ ಆರೋಗ್ಯ ಕೇಂದ್ರ, ಮತ್ತು ಜೇವರ್ಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈರನ್ ನಡೆಯಲಿದೆ. ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್ಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುತ್ತೆ. ಒಂದೊಂದು ಆರೋಗ್ಯ ಕೇಂದ್ರದಲ್ಲಿ 25 ಜನರಿಗೆ ಲಸಿಕೆ ವಿತರಣೆಯ ತರಬೇತಿ ನೀಡಲಾಗುತ್ತೆ. ಪ್ರಾಥಮಿಕವಾಗಿ 15,900 ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತೆ. ಈ ಕುರಿತು ಕೋವಿಡ್ ಆಪ್ನಲ್ಲಿ ಆರೋಗ್ಯಾಧಿಕಾರಿಗಳು ಹೆಸರು ನೋಂದಣಿ ಮಾಡಿದ್ದಾರೆ.


ಮಲೆನಾಡು ಶಿವಮೊಗ್ಗದಲ್ಲೂ ಇಂದಿನಿಂದ ಕೊರೊನಾ ಲಸಿಕೆಯ ಡ್ರೈ ರನ್ ನಡೆಯಲಿದೆ. ಡ್ರೈರನ್ ಸಂಬಂಧ ಆರೋಗ್ಯ ಸಿಬ್ಬಂದಿಗೆ ಆನ್ಲೈನ್ ತರಬೇತಿ ನೀಡಲಾಗ್ತಿದೆ.
ದೇಶದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಆಸ್ಟ್ರೇಜೆನೆಕಾ ಸಂಸ್ಥೆ ಆಕ್ಸ್ಫರ್ಡ್ ಯೂನಿವರ್ಸಿಟಿ ಅಭಿವೃದ್ಧಿಪಡಿಸಿರುವ AZD-1222 ಲಸಿಕೆಯ ತುರ್ತು ಬಳಕೆಗೆ ತಜ್ಞರು ಡಿಸಿಜಿಐಗೆ ಶಿಫಾರಸು ಮಾಡಿದ್ದಾರೆ. ಹೀಗಾಗಿ ಆದಷ್ಟ ಶೀಘ್ರದಲ್ಲೇ ಕೊರೊನಾ ಲಸಿಕೆ ವಿತರಣೆಯ ಕಾರ್ಯ ಶುರುವಾಗಲಿದೆ.









