- Advertisement -
- Advertisement -
ಯಾದಗಿರಿ : ಬಳ್ಳಾರಿಯಲ್ಲಿ ಕೊರೊನಾ ಸೊಂಕಿತ ಶವಗಳನ್ನ ಎಳೆದು ತಂದು ಗುಂಡಿಯೊಳಗೆ ಬಿಸಾಕಿರುವ ಘಟನೆ ಮಾಸುವ ಮುನ್ನವೇ ಯಾದಗಿರಿಯಲ್ಲೂ ಅದೇ ರೀತಿ ಶವಗಳನ್ನ ಎಳೆದು ತರುತ್ತಿರುವ ವಿಡಿಯೋ ವೈರಲ್ ಆಗಿದೆ.ರಾಯಚೂರಿನ ಸಿರಿವಾರದಲ್ಲಿ ನಡೆದ ಮಗಳ ಮದುವೆ ಮರುದಿನವೇ ಸೋಂಕಿಗೆ ವ್ಯಕ್ತಿ ಬಲಿಯಾಗಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಸೊಂಕು ಪತ್ತೆಯಾದ ಹಿನ್ನೆಲೆ ಹುಟ್ಟೂರು ಹೊನಗೇರಾ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ಹಿನ್ನೆಲೆ ಕೊರೊನಾ ನಿಯಮಾವಳಿಗಳ ಪ್ರಕಾರ ಸಂಸ್ಕಾರ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತು.ಆದರೆ ಕುಟುಂಬದವರ ಉಪಸ್ಥಿತರಿರದ ಕಾರಣ ಶವವನ್ನ ದರ ದರನೇ ಎಳೆದುಕೊಂಡು ಗುಂಡಿಯಲ್ಲಿ ಎಸೆದಿದ್ದಾರೆ. ಅಂತ್ಯಸಂಸ್ಕಾರದ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಜಿಲ್ಲಾಡಳಿತದ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -