Saturday, June 13, 2026
spot_imgspot_img
spot_imgspot_img

ಹಾಡಹಗಲೇ ಕಾರ್ಪೋರೇಟರ್ ಹತ್ಯೆ: ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ – ಎನ್ ಆರ್ ರಮೇಶ್!

- Advertisement -
- Advertisement -

ಬೆಂಗಳೂರು: ಹಾಡಹಗಲೇ ಮಾಜಿ ಕಾಪೋರೇಟರ್ ಅನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಅಂಜನಪ್ಪ ಗಾರ್ಡನ್ ನಲ್ಲಿ ನಡೆದಿದೆ. ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಅವರು ಇಂದು ಬೆಳಗ್ಗೆ ಫುಡ್ ಕಿಟ್ ಹಂಚುತ್ತಿದ್ದ ವೇಳೆ ಸ್ಥಳಕ್ಕೆ ಬಂದ ಇಬ್ಬರು ದುಷ್ಕರ್ಮಿಗಳು ಮಾಜಿ ಕಾರ್ಪೋರೇಟರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಅಲ್ಲೇ ಕೊನೆಯುಸಿರೆಳೆದಿದ್ದಾರೆ. ಗನ್‌ಮ್ಯಾನ್ ಆಗಿದ್ದ ಪೀಟರ್ ರೇಖಾ ಅವರನ್ನು ಬರ್ಬರ ಹತ್ಯೆ ಮಾಡಿದ್ದಾರೆ.

ಪೀಟರ್, ಸ್ಟೀಫನ್ ಮತ್ತು ಸರ‍್ಯ ಎಂಬುವವರು ಹತ್ಯೆಗೆ ಮೊದಲೇ ಸಂಚು ರೂಪಿಸದ್ದರು ಎಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಮಾಜಿ ಕಾರ್ಪೋರೇಟರ್ ಎನ್ ಆರ್ ರಮೇಶ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಮಾಜಿ ಕಾರ್ಪೋರೇಟರ್, ಬಿಜೆಪಿಯ ರೇಖಾ ಕದಿರೇಶ್ ಹತ್ಯೆ ರಾಜಕೀಯ ಪ್ರೇರಿತ ಎಂದು ಮಾಜಿ ಕಾರ್ಪೋರೇಟರ್ ಎನ್ ಆರ್ ರಮೇಶ್ ಆಕ್ರೋಶ ವ್ಕಕ್ತಪಡಿಸಿದ್ದಾರೆ. ಶಾಸಕ ಜಮೀರ್ ಅಹ್ಮದ್ ಕ್ಷೇತ್ರದಲ್ಲಿ ಯಾವುದೇ ರಕ್ಷಣೆ ಇಲ್ಲ. ಬಿಬಿಎಂಪಿ ಚುನಾವಣೆಯಲ್ಲಿ ರೇಖಾ ಗೆಲ್ಲುತ್ತಾರೆ ಎಂಬ ಕಾರಣದಿಂದ ಜಮೀರ್ ಅಹ್ಮದ್ ಅವರು ಕೊಲೆಗೆ ಬೆಂಬಲ ನೀಡಿರುವುದು ಸತ್ಯ ಎಂದು ಆರೋಪಿಸಿದ್ದಾರೆ.

- Advertisement -

Related news

error: Content is protected !!