ನ. 25 ರಿಂದ 26 ರವರೆಗೆ ನಡೆಯುವ ಬೆಂಗಳೂರು ಕಂಬಳದ ಫುಲ್ ಡಿಟೈಲ್ಸ್
ಕಂಬಳ ತುಳುನಾಡಿನ ಜಾನಪದ ಕ್ರೀಡೆ. ಇತ್ತೀಚಿನ ಕೆಲ ವರ್ಷಗಳಲ್ಲಂತೂ ಕರಾವಳಿಯ ಗಡಿಯನ್ನೂ ಮೀರಿ ರಾಜ್ಯ-ದೇಶಾದ್ಯಂತ ಕಂಬಳ ತನ್ನ ಪ್ರಖ್ಯಾತಿಯ ಮೂಲಕ ಸದ್ದು ಮಾಡುತ್ತಿದೆ. ಸುಮಾರು 800 ವರ್ಷಕ್ಕೂ ಹಳೆಯ ಇತಿಹಾಸವನ್ನು ಹೊಂದಿರುವ ಈ ಜಾನಪದ ಕ್ರೀಡೆ ತನ್ನದೇ ಆದ ಆಚರಣೆ, ಸಂಪ್ರದಾಯ ನಂಬಿಕೆಗಳನ್ನೊಳಗೊಂಡಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಆಚರಣೆ ಪ್ರತಿಷ್ಠೆಗಾಗಿ ನಡೆಯುವ ಈ ಕಂಬಳ ಕರಾವಳಿ ಭಾಗದಲ್ಲಿ ಅತ್ಯಂತ ವಿಶೇಷ. ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಕೇರಳ ರಾಜ್ಯದ ಕಾಸರಗೋಡು ಭಾಗದಲ್ಲಿ ಕಂಬಳ ಕಾಮನ್. ವರ್ಷದಲ್ಲಿ ಕಂಬಳ ಋತುವಿನಲ್ಲಿ ಕರಾವಳಿಯಲ್ಲಿ ಸಾಲು ಸಾಲು ಕಂಬಳಗಳು ನಡೆಯುತ್ತವೆ. ಆದರೆ ಈ ವರ್ಷ ಇದೆಲ್ಲದಕ್ಕೂ ಮೊದಲು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಇತಿಹಾಸದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ.
ಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನವೆಂಬರ್ 25 ಹಾಗೂ 26 ರಂದು ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ’ಬೆಂಗಳೂರು ಕಂಬಳ – ನಮ್ಮ ಕಂಬಳ’ ನಡೆಯಲಿದೆ. ನ. 24 ರಂದು ಬೆಳಿಗ್ಗೆ 10.30ಕ್ಕೆ ಆಹಾರ ಮೇಳವನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜ್ ಉದ್ಘಾಟಿಸಲಿದ್ದು, ವಸ್ತು ಪ್ರದರ್ಶನ ಮೇಳವನ್ನು ವಿಶ್ವ ತುಳು ಮತ್ತು ಸಾಂಸ್ಕೃತಿಕ ಸಮ್ಮೇಳನದ ಗೌರವಾಧ್ಯಕ್ಷ ಡಾ.ರವಿ ಶೆಟ್ಟಿ ಮೂಡಂಬೈಲು, ಕತಾರ್ ಉದ್ಘಾಟಿಸಲಿದ್ದಾರೆ.
ದಿನಾಂಕ 25-11-2023 ನೇ ಶನಿವಾರ- ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಬೆಂಗಳೂರು ಉತ್ತರದ ಸಂಸದ ಡಿ.ವಿ.ಸದಾನಂದ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಬಿ.ಯಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರು ಉದ್ಘಾಟಿಸಲಿದ್ದಾರೆ. ಕಂಬಳ ಕರೆಯನ್ನು ಖ್ಯಾತ ಸಿನಿಮಾ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಉದ್ಘಾಟಿಸಲಿದ್ದಾರೆ. ಸಾಂಸ್ಕೃತಿಕ ವೇದಿಕೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಈ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ, ಸಂಸದ ನಳಿನ್ ಕುಮಾರ್ ಕಟೀಲ್, ಸೇರಿದಂತೆ ಹಲವು ಗಣ್ಯ ಅತಿಥಿಗಳು ಭಾಗಹಿಸಲಿದ್ದಾರೆ. ಸಂಜೆ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಉದ್ಘಾಟಿಸಲಿದ್ದಾರೆ. ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್, ಗೃಹ ಸಚಿವ ಡಾ.ಜಿ.ಪರಮೇಶ್ವರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್,ಐ.ಟಿ & ಬಿ.ಟಿ.,ಸಚಿವ ಪ್ರೀಯಾಂಕ್ ಖರ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನ.26 ರಂದು ಬೆಳಗ್ಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವರು, ಭಾರತ ಸರ್ಕಾರ ಶೋಭಾ ಕರಂದ್ಲಾಜೆ,, ಭಾರತ ಸರ್ಕಾರ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡ, ಮೂಡಬಿದಿರೆ ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಮಧ್ಯಾಹ್ನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾರತ ಸರ್ಕಾರ ಸಚಿವ ಅರವಿಂದ ಲಿಂಬಾವಳಿ, ಖ್ಯಾತ ಚಲನಚಿತ್ರ ನಟ ದರ್ಶನ್ ತೂಗುದೀಪ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕ ಕುಸ್ತಿಪಟುಗಳನ್ನು ಸನ್ಮಾನಿಸಲಾಗುವುದು. ಬಳಿಕ ಸಂಜೆ ಬಹುಮಾನ ವಿತರಣೆ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಕೆ. ಸುರೇಶ್ ಸಂಸದರು ಬೆಂಗಳೂರು ಗ್ರಾಮಾಂತರ, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಳ ಭಾಗವಹಿಸಲಿದ್ದಾರೆ.
ನ. 25 ನೇ ಶನಿವಾರದಂದು ಬೆಳಗ್ಗೆಯಿಂದ ಸಂಜೆಯವರೆಗೆ ತುಳುನಾಡಿನ ಸಾಂಸ್ಕೃತಿಕ ವೈಭವ ಜರಗಲಿರುವುದು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ನಿರೂಪಣಾ ಕ್ಷೇತ್ರದಲ್ಲಿ ರಾಜ್ಯ ದೇಶಾದ್ಯಂತ ಹೆಸರುವಾಸಿಯಾಗಿರುವ ತುಳುನಾಡಿನ ಹೆಮ್ಮೆಯ ನಿರೂಪಕರಾದ ಅನುಶ್ರೀ, ಚೈತ್ರ ವಾಸುದೇವನ್, ರೂಪೇಶ್ ಶೆಟ್ಟಿ ಹಾಗೂ ಸೌಜನ್ಯ ಹೆಗ್ಡೆ ಇವರ ಅಧ್ಭುತ ಶೈಲಿಯ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿ ಬರಲಿದೆ. ಸಂಜೆ ೭ ಗಂಟೆಗೆ ಕನ್ನಡ ಚಲನಚಿತ್ರದ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರ ಸಾರಥ್ಯದಲ್ಲಿ ’ಗುರಕಿರಣ್ ನೈಟ್” ನಡೆಯಲಿದೆ.
ನ. 26 ನೇ ಆದಿತ್ಯವಾರದಂದು ಸಂಜೆ 7.00ರಿಂದ ಸ್ಯಾಂಡಲ್‌ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇವರ ಸಾರಥ್ಯದಲ್ಲಿ ತಂಡದಿಂದ ’ಸಂಗೀತ ಸಂಜೆ’ ನಡೆಯಲಿರುವುದು
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅನುಷ್ಕಾ ಶೆಟ್ಟಿ, ಕೆ.ಎಲ್ ರಾಹುಲ್, ಶಿವರಾಜ್‌ಕುಮಾರ್, ಉಪೇಂದ್ರ, ಗಣೇಶ್, ಧ್ರುವಾಸರ್ಜಾ, ದಿಗಂತ್, ಶೀನಗರ ಕಿಟ್ಟಿ, ಅನಿರುದ್ಧ್ ಜತ್ಕರ್, ವಿ.ಮನೋಹರ್, ರಚಿತರಾಮ್, ಅದಿತಿ ಪ್ರಭುದೇವ, ಹರ್ಷಿಕಾ ಪೂಣಚ್ಚ, ಮೇಘಾ ಶೆಟ್ಟಿ, ಹರಿಪ್ರಿಯಾ, ಪೂಜಾ ಹೆಗ್ಡೆ, ರವಿಚಂದ್ರನ್, ರಿಷಬ್ ಶೆಟ್ಟಿ ಸೇರಿದಂತೆ ಹಲವಾರು ಸಿನಿ ತಾರೆಯರು ಕಂಬಳಕ್ಕೆ ಮೆರುಗು ನೀಡಲಿದ್ದಾರೆ.
ಈ ಬೃಹತ್ ಕಾರ್ಯಕ್ರಮಕ್ಕೆ ಬರುವ ಎಲ್ಲಾ ಕಂಬಳಾಭಿಮಾನಿಗಳಿಗೆ ಬೆಂಗಳೂರು ಕಂಬಳ ಸಮಿತಿಯ ಗೌರವಾಧ್ಯಕ್ಷರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರು ಶಾಸಕ ಅಶೋಕ್ ಕುಮಾರ್ ರೈ, ಗೌರವಾಧ್ಯಕ್ಷರು ಕೆ ಪ್ರಕಾಶ್ ಶೆಟ್ಟಿ, ಉಪಾಧ್ಯಕ್ಷರು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಹಾಗೂ ಕಾರ್ಯಾಧ್ಯಕ್ಷರು ಗುರುಕಿರಣ್ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು ಆದರದ ಸ್ವಾಗತ ಬಯಸುತ್ತಿದ್ದಾರೆ.