Saturday, June 28, 2025
spot_imgspot_img
spot_imgspot_img

ಇಬ್ಬರು ಮಕ್ಕಳೊಂದಿಗೆ ದಂಪತಿ ಆತ್ಮಹತ್ಯೆ

- Advertisement -
- Advertisement -

ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಎರ್ನಾಕುಲಂನ ಕದಮಕ್ಕುಡಿ ಎಂಬಲ್ಲಿ ನಡೆದಿದೆ. ಮೃತರನ್ನು ನಿಜೋ (39), ಪತ್ನಿ ಶಿಲ್ಪಾ (29), ಮಕ್ಕಳನ್ನು ಅಬ್ಲೆ (7) ಹಾಗೂ ಅರೋನ್ (5) ಎಂದು ಗುರುತಿಸಲಾಗಿದೆ.

ದಂಪತಿ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದರು. ಕೆಳಗಿನ ಮಹಡಿಯಲ್ಲಿ ನಿಜೋ ಪೋಷಕರು ಹಾಗೂ ಸಹೋದರ, ಆತನ ಕುಟುಂಬ ವಾಸವಾಗಿತ್ತು. ನಿಜೋ ಆರ್ಟಿಸ್ಟ್ ಆಗಿದ್ದು, ಮಕ್ಕಳು ಶಾಲೆಗೆ ಹೋಗುತ್ತಿದ್ದರು. ಶಿಲ್ಪಾ ಕೆಲಸದ ನಿಮಿತ್ತ ಇಟಲಿಗೆ ಹೋಗಿದ್ದಳು. ಹಣದ ಸಮಸ್ಯೆ ನಿವಾರಿಸಲೆಂದು ಕೆಲಸ ಹುಡುಕಿಕೊಂಡು ಹೋದರೂ ಅಲ್ಲಿ ಅವಳಿಗೆ ಬೇಕಾದ ಕೆಲಸ ಸಿಕ್ಕಿಲ್ಲವೆಂದು ವಾಪಸ್ಸಾಗಿದ್ದಳು.ಹಣಕಾಸಿನ ಸಮಸ್ಯೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ

ನಿಜೋ ಹಾಗೂ ಶಿಲ್ಪಾ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾದರೆ, ಇಬ್ಬರು ಮಕ್ಕಳು ಬೆಡ್ ಮೇಲೆ ಶವವಾಗಿ ಬಿದ್ದಿದ್ದರು. ಪೊಲೀಸರ ಪ್ರಕಾರ,ಮೊದಲು ಮಕ್ಕಳಿಗೆ ವಿಷವುಣಿಸಿ ಕೊಲೆ ಮಾಡಿದ್ದಾರೆ. ಬಳಿಕ ತಾವು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ

ಮೃತದೇಹಗಳನ್ನು ಪರವೂರು ತಾಲೂಕು ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಹಾಗೂ ಪೊಲೀಸ್ ತನಿಖೆಯೂ ನಡೆಯುತ್ತಿದೆ.

- Advertisement -

Related news

error: Content is protected !!