Thursday, August 27, 2026
spot_imgspot_img
spot_imgspot_img

ತುಂಡಾಗಿ ಬಿದ್ದ ವಿದ್ಯುತ್‌ ತಂತಿ ತುಳಿದು ದಂಪತಿ ಮೃತ್ಯು

- Advertisement -
- Advertisement -

ಕೆಲಸಕ್ಕೆ ಹೋಗುವ ವೇಳೆ ತುಂಡಾಗಿ ಬಿದ್ದ ವಿದ್ಯುತ್ ತಂತಿ ತುಳಿದು ದಂಪತಿ ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮದ ಸುಳ್ಸೆ ಭಟ್ರು ಮನೆ ತೋಟದ ಜಮೀನಿನಲ್ಲಿ ನಡೆದಿದೆ.

ಮಹಾಬಲ ದೇವಾಡಿಗ (58), ಲಕ್ಷ್ಮಿ ಮಹಾಬಲ ದೇವಾಡಿಗ (48) ಮೃತರು.

ಮನೆ ಕೆಲಸಕ್ಕೆ ಹೋಗುವಾಗ ಪತಿಗೆ ವಿದ್ಯುತ್ ಶಾಕ್ ತಗುಲಿದ್ದು ಅವರನ್ನು ಪತ್ನಿ ರಕ್ಷಿಸಲು ಹೋಗಿ ಇಬ್ಬರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ, ಕುಂದಾಪುರ ವೃತ್ತ ನಿರೀಕ್ಷಕರು ಜಯರಾಮ್ ಡಿ. ಗೌಡ ,ಕಂದಾಯ ಆರ್.ಐ . ರಾಘವೇಂದ್ರ ದೇವಾಡಿಗ,ಸುಳ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ್ ಪುತ್ರನ್, ಶೇಖರ್ ಬಳೆಗಾರ, ಗಂಗೊಳ್ಳಿ ಜೆಇ ದಿನೇಶ್ ಶೆಟ್ಟಿ, ಸುಳ್ಸೆ ಗ್ರಾಮ ಪಂಚಾಯತ್ ಗ್ರಾಮ ಕರಣಿಕ ಸೋಮಪ್ಪ, ಹಾಗೂ ಪೊಲೀಸ್ ಸಿಬ್ಬಂದಿಗಳು, ಮೆಸ್ಕಾಂ ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.
ಘಟನೆ ಬಗ್ಗೆ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!