Saturday, June 28, 2025
spot_imgspot_img
spot_imgspot_img

ಅಕ್ರಮ ಜಾನುವಾರು ಸಾಗಾಟದ ಕಂಟೈನರ್ ವಾಹನ ಪತ್ತೆ 24 ಜಾನುವಾರುಗಳ ರಕ್ಷಣೆ

- Advertisement -
- Advertisement -

ಕೇರಳದಿಂದ ಕರ್ನಾಟಕದ ಕಡೆಗೆ ಕಂಟೈನರ್ ವಾಹನವೊಂದರಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ಪತ್ತೆ ಹಚ್ಚಿ 24 ಜಾನುವಾರನ್ನು ರಕ್ಷಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳದಿಂದ ಕರ್ನಾಟಕ ರಾಜ್ಯದ ಕಡೆಗೆ ಜಾನುವಾರುಗಳನ್ನು ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ನಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಕಮೀಷನರೇಟ್ ವ್ಯಾಪ್ತಿ ಹಾದು ಹೋಗುವ ರಸ್ತೆಗಳಲ್ಲಿ ಹೆಚ್ಚು ಚೆಕ್ ಪೋಸ್ಟ್‌ಗಳನ್ನು ತೆರೆದು ದಿನಾಂಕ: 01-06-2025 ರಂದು ಬೆಳಗ್ಗಿನ ಜಾವ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಕಂಟೈನರ್ ವಾಹನವನ್ನು ತಲಪಾಡಿ ಟೋಲ್ ಗೇಟ್ ಬಳಿ ಪತ್ತೆ ಹಚ್ಚಿ ವಾಹನದಲ್ಲಿದ ಆರೋಪಿಯನ್ನು ಬಂಧಿಸಿ ಕಂಟೈನರ್ ವಾಹನದಲ್ಲಿ ನಾಗಾಟ ಮಾಡುತ್ತಿದ್ದ 24 ಜಾನುವಾರುಗಳನ್ನು ರಕ್ಷಿಸಲಾಗಿದೆ ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಕಂಟೈನರ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆ ಕ್ರ 82/2025 ರಂತೆ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿರುತ್ತದೆ. ರಕ್ಷಿಸಿರುವ 24 ಜಾನುದಾರುಗಳನ್ನು ಗೋಪಾಟೆಗೆ ಹಸ್ತಾಂತರಿಸಲಾಗಿದೆ.

- Advertisement -

Related news

error: Content is protected !!