Friday, May 17, 2024
spot_imgspot_img
spot_imgspot_img

ಗೋ ಹತ್ಯೆ ನಿಷೇಧ ಕಾಯ್ದೆ ಮೂಲಕ ಗೋ ಮಾಂಸ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡಿದ್ದಾರೆ-ಪ್ರೊ.ಕೆ.ಎಸ್‍. ಭಗವಾನ್‍.

- Advertisement -G L Acharya panikkar
- Advertisement -

ಮೈಸೂರು: ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಿಂದ ರೈತರಿಗೆ ಯಾವುದೇ ರೀತಿಯ ಅನುಕೂಲ ಇಲ್ಲ. ಇದರಿಂದ ಗೋ ಮಾಂಸ ರಫ್ತಿಗೆ ಹೆಚ್ಚಿನ ಉತ್ತೇಜ ನೀಡಿದಂತಾಗುತ್ತದೆ ಎಂದು ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್‍. ಭಗವಾನ್‍ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ರೈತ ದನವನ್ನು ಕೊಲ್ಲುವ ಉದ್ದೇಶಕ್ಕೆ ಸಾಕಾಗುವುದಿಲ್ಲ. ಆತನಿಗೆ ಹೆಚ್ಚಿನ ಸಂಖ್ಯೆಯಲ್ಲಿ ದನಗಳನ್ನು ಸಾಕಲು ಸಾಮರ್ಥ್ಯ ಇಲ್ಲದ ಸಂದರ್ಭದಲ್ಲಿ ಹೆಚ್ಚುವರಿ ದನಗಳನ್ನು ಮಾರಾಟ ಮಾಡುತ್ತಾನೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಅಮೆರಿಕದಂತಹ ದೇಶಗಳಲ್ಲಿ ಮಾಂಸದ ಉದ್ದೇಶಕೋಸ್ಕರ ದನಗಳನ್ನು ಸಾಕುತ್ತಾರೆ. ಆದರೆ, ನಮ್ಮಲ್ಲಿ ಅಂಥ ವ್ಯವಸ್ಥೆ ಇಲ್ಲ ಎಂದರು.

ದೇಶದಿಂದ ವಿದೇಶಕ್ಕೆ ದನದ ಮಾಂಸವನ್ನು ಹೆಚ್ಚಿನ ಸಂಖ್ಯೆಯಲ್ಲಿ ರಫ್ತು ಮಾಡುತ್ತಿರುವುದು ಮೇಲ್ವರ್ಗದವರು ಹಾಗೂ ಬ್ರಾಹ್ಮಣರು. ಈ ಗೋಹತ್ಯೆ ನಿಷೇಧ ಕಾಯ್ದೆಯಿಂದ ದನದ ಮಾಂಸವನ್ನು ಹೊರ ದೇಶಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಅವರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಆಪಾದಿಸಿದರು.

ಯಾರು ದನದ ಮಾಂಸವನ್ನು ತಿನ್ನುತ್ತಿರಲಿಲ್ಲವೋ ಅವರು ನಿಜವಾದ ಬ್ರಾಹ್ಮಣರಲ್ಲ’ ಎಂದು ಸ್ವತಃ ಸ್ವಾಮಿ ವಿವೇಕಾನಂದರೇ ತಮ್ಮ ಕೃತಿಯಲ್ಲಿ ಬರೆದಿದ್ದಾರೆ. ಯಜ್ಞ ಯಾಗದಲ್ಲಿ ದನವನ್ನು ಬಲಿ ಕೊಡುತ್ತಿದ್ದರು. ಯಾವ ಮಾಂಸವನ್ನು ಯಾವ ಪುರೋಹಿತ ತಿನ್ನಬೇಕೆಂಬ ಪಟ್ಟಿಯೇ ಇದೆ. ಆದರೆ, ಇಂದು ಬ್ರಾಹ್ಮಣರು ಪ್ರಾಣಿಗಳ ಬಗ್ಗೆ ಕಳಕಳಿ ಇರುವವರಂತೆ ಬಿಂಬಿಸಿಕೊಳ‍್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ನಮ್ಮಲ್ಲೂ ಕೆಲವರು ದನದ ಮಾಂಸ ತಿನ್ನುತ್ತಿದ್ದಾರೆ. ಮುಸ್ಲಿಂ, ಕ್ರೈಸ್ತರು ಮಾತ್ರ ದನದ ಮಾಂಸವನ್ನು ತಿನ್ನುತ್ತಿದ್ದಾರೆ ಎಂಬ ಭಾವನೆ ಇಟ್ಟುಕೊಳ‍್ಳಬಾರದು. ರೈತರು ಉಪಯೋಗ ಇರುವ ದನಗಳನ್ನು ಇಟ್ಟುಕೊಂಡು ಉಪಯೋಗ ಇಲ್ಲದೆ ಇರುವ ದನಗಳನ್ನು ಮಾರಾಟ ಮಾಡುತ್ತಾರೆ. ಹೀಗಾಗಿ ಈ ವಿಚಾರದಲ್ಲಿ ಸರ್ಕಾರ ಭಾವನಾತ್ಮಕವಾಗಿ ಆಲೋಚನೆ ಮಾಡದೆ ಈ ಹಿಂದಿನ ಕಾಯ್ದೆಯ ಪ್ರಕಾರ ಮುಂದುವರೆಯುವುದು ಸೂಕ್ತ. ಅಲ್ಲದೆ ನೂತನ ಮಸೂದೆಗೆ ವಿಧಾನಸಭೆಯಲ್ಲಿ ಚರ್ಚೆ ಇಲ್ಲದೆ ಅನುಮೋದನೆ ನೀಡಿರುವುದು ಖಂಡನೀಯ ಎಂದರು.

- Advertisement -

Related news

error: Content is protected !!