Tuesday, June 25, 2024
spot_imgspot_img
spot_imgspot_img

ವಿಶಾಖಪಟ್ಟಣದಲ್ಲಿ ಕ್ರೇನ್ ಕುಸಿದು 10 ಮಂದಿ ದಾರುಣ ಸಾವು

- Advertisement -G L Acharya panikkar
- Advertisement -

ವಿಶಾಖಪಟ್ಟಣ: ಕ್ರೇನ್ ಕುಸಿದು 10 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಬಳಿ ಬೃಹತ್ ಕ್ರೇನ್ ಸ್ಥಾಪಿಸುವ ವೇಳೆ ಈ ದುರಂತ ಸಂಭವಿಸಿದೆ. ಹಲವಾರು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಲಿಯಾದವರ ಪೈಕಿ ನಾಲ್ವರು ಎಚ್ ಎಸ್ ಎಲ್ ನೌಕರರಾಗಿದ್ದರೆ, ಉಳಿದವರು ಗುತ್ತಿಗೆ ಸಂಸ್ಥೆಗೆ ಸೇರಿದವರು ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ತಿಳಿಸಿದ್ದಾರೆ. ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ ಮೋಹನ್ ರೆಡ್ಡಿ ತಕ್ಷಣವೇ ಕ್ರಮಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!