Thursday, May 2, 2024
spot_imgspot_img
spot_imgspot_img

ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಐಪಿಎಲ್ ಚಾಂಪಿಯನ್; RCB ಆಟಗಾರನ ಪಾಲಾದ ಟಾಟಾ ಟಿಯಾಗೊ ಕಾರು..! ಹೇಗೆ ಗೊತ್ತಾ?

- Advertisement -G L Acharya panikkar
- Advertisement -

ಐಪಿಎಲ್ ಸೀಸನ್​ 16 ಮುಕ್ತಾಯವಾಗಿದೆ. ಈ ಬಾರಿ ಪ್ರಶಸ್ತಿ ಗೆಲ್ಲುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK)​ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅತ್ಯಂತ ರೋಚಕವಾಗಿ ಸೋಮವಾರ ನಡೆದ ಫೈನಲ್​ ಪಂದ್ಯದಲ್ಲಿ ಕಡೇಯ ಎರಡು ಎಸೆತಗಳಲ್ಲಿ ರವೀಂದ್ರ ಜಡೇಜಾ ಅವರು ಸಿಕ್ಸರ್​ ಮತ್ತು ಬೌಂಡರಿ ಬಾರಿಸುವ ಮೂಲಕ ಚೆನ್ನೈ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಟ್ರೋಫಿ ಗೆಲ್ಲುವ ಮೂಲಕ ಚೆನ್ನೈ ತಂಡ ಮುಂಬೈ ದಾಖಲೆಯನ್ನು ಸರಿಗಟ್ಟಿತು.

​ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ ತಂಡ ಸಾಯಿ ಸುದರ್ಶನ್​ ಅವರ ಪ್ರಚಂಡ ಬ್ಯಾಟಿಂಗ್​ ನಿಂದ 4 ವಿಕೆಟ್​​ಗೆ 214 ರನ್​ ರಾಶಿ ಹಾಕಿತು. ಗುರಿ ಬೆನ್ನಟ್ಟಿದ ಚೆನ್ನೈ ಮೂರು ಎಸೆತಗಳಲ್ಲಿ 4 ರನ್​ ಗಳಿಸಿದ ವೇಳೆ ಜೋರಾಗಿ ಮಳೆ ಸುರಿಯಿತು. ರಾತ್ರಿ 12.10 ರಿಂದ ಆರಂಭಗೊಂಡ ಪಂದ್ಯದಲ್ಲಿ ಡಕ್ವರ್ತ್​ ನಿಯಮದ ಪ್ರಕಾರ ಪಂದ್ಯವನ್ನು 15 ಓವರ್​ಗೆ ಸೀಮಿತಗೊಳಿಸಲಾಯಿತು. ಧೋನಿ ಪಡೆಗೆ 171 ರನ್​ಗಳ ಗುರಿ ನಿಗದಿಪಡಿಸಲಾಯಿತು. ಇದನ್ನು ಅತ್ಯಂತ ಸಾಹಸಮಯ ರೀತಿಯಲ್ಲಿ ಬೆನ್ನಟ್ಟಿ 5 ವಿಕೆಟ್​ಗೆ 171 ರನ್​ ಬಾರಿಸಿ ಗೆಲುವು ದಾಖಲಿಸಿತು.

10 ಲಕ್ಷ ರೂ ಮೌಲ್ಯದ ಕಾರು ಆರ್‌ಸಿಬಿ ಆಟಗಾರನ ಪಾಲಿಗೆ
ಐಪಿಎಲ್ ಸೀಸನ್​ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಆಟಗಾರನಿಗೆ ನೀಡಲಾಗುವ ಟಾಟಾ ಕಾರ್ ( 10 ಲಕ್ಷ ರೂ.)​ ಈ ಬಾರಿ ಆಲ್​ರೌಂಡರ್ ಆಟಗಾರನ ಪಾಲಾಗಿರುವುದು ವಿಶೇಷ. ಹೌದು, ಸೂಪರ್ ಸ್ಟ್ರೈಕರ್​ಗೆ ಘೋಷಿಸಲಾಗಿದ್ದ ಟಾಟಾ ಟಿಯಾಗೊ ಇವಿ ಕಾರ್ RCB​​ ತಂಡದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಪಾಲಾಗಿದೆ.

ಆರ್​ಸಿಬಿ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದ ಮ್ಯಾಕ್ಸ್​ವೆಲ್ ಈ ಬಾರಿ 14 ಇನಿಂಗ್ಸ್​ಗಳಲ್ಲಿ 400 ರನ್ ಬಾರಿಸಿದ್ದರು. ಅದು ಕೂಡ 183.48 ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ. ಈ ಮೂಲಕ ಈ ಸೀಸನ್​ನ ಸೂಪರ್ ಸ್ಟ್ರೈಕರ್ ಆಗಿ ಗ್ಲೆನ್ ಮ್ಯಾಕ್ಸ್​ವೆಲ್ ಹೊರಹೊಮ್ಮಿದ್ದಾರೆ. ಅದರಂತೆ ಟಾಟಾ ಟಿಯಾಗೋ ಎಲೆಕ್ಟ್ರಿಕ್ ಕಾರ್ ಅನ್ನು​ ಆರ್​ಸಿಬಿ ಆಲ್​​ರೌಂಡರ್ ತಮ್ಮದಾಗಿಸಿಕೊಂಡಿದ್ದಾರೆ.

- Advertisement -

Related news

error: Content is protected !!